ಅಮೇರಿಕಾ: ಯುವ ರೋಗಿಯನ್ನು ಹಾಗೂ ಇತರ ಏಳು ಜನರನ್ನು ಸಾಗಿಸುತ್ತಿದ್ದ ಮೆಕ್ಸಿಕ್ನ ನೌಕಾಪಡೆಯ ಸಣ್ಣ ವಿಮಾನವು ಗಾಲ್ವೆಸ್ಟನ್ ಬಳಿ ಪತನಗೊಂಡು ಐದು ಜನರು ಸಾವನ್ನಪ್ಪಿದ್ದಾರೆ.
ನೌಕಾಪಡೆಯ ಅಧಿಕಾರಿಗಳು ಹಾಗೂ ಒಂದು ಮಗು ಸೇರಿದಂತೆ ನಾಲ್ವರು ನಾಗರಿಕರು ಇದ್ದರು.
ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಹಾಗೂ ಅಪಘಾತದ ಕಾರಣ ತನಿಖೆಯಲ್ಲಿದೆ ಎಂದು ಅಮೇರಿಕಾ ಕೋಸ್ಟ್ ಗಾರ್ಡ್ ದೃಢಪಡಿಸಿದೆ.
ಹೂಸ್ಟನ್‌ನ ಆಗ್ನೇಯಕ್ಕೆ 50 ಮೈಲುಗಳು ದೂರದಲ್ಲಿರುವ ಟೆಕ್ಸಾಸ್ ಕರಾವಳಿಯ ಗಾಲ್ವೆಸ್ಟನ್ ಬಳಿಕ ಕಾಸ್‌ವೇಯ ಬೇಸ್ ಬಳಿ ಅಪಘಾತ ಸಂಭವಿಸಿದೆ. ವಿಮಾನವು ವೈದ್ಯಕೀಯ ಕಾರ್ಯಾಚರಣೆಗೆ ಸಹಾಯ ಮಾಡುತ್ತಿತ್ತು ಎಂದು ಮೆಕ್ಸಿಕೋದ ನೌಕಾಪಡೆ ಹೇಳಿಕೆ ನೀಡಿದೆ.





