Mysore
24
mist

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಮೆಹುಲ್‌ ಚೋಕ್ಸಿ ಹಸ್ತಾಂತರ : ಗೃಹ ಸಚಿವಾಲಯ ಪತ್ರ

ಹೊಸದಿಲ್ಲಿ : ಭಾರತದಲ್ಲಿ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿ ಬೆಲ್ಜಿಯಂನಲ್ಲಿ ಬಂಧನಕ್ಕೊಳಪಟ್ಟಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ದೇಶಕ್ಕೆ ಹಸ್ತಾಂತರ ಮಾಡಿದರೆ ಕಾನೂನು ರೀತಿ ನಡೆಸಿಕೊಳ್ಳುತ್ತೇವೆ ಎಂದು ಗೃಹಸಚಿವಾಲಯ ಪತ್ರ ಬರೆದಿದೆ.

ಬೆಲ್ಜಿಯಂನ ನ್ಯಾಯಾಂಗ ಅಧಿಕಾರಿಗಳಿಗೆ ಮತ್ತು ಸಚಿವಾಲಯಕ್ಕೆ ಕೇಂದ್ರ ಗೃಹಕಲ್ಯಾಣ ಇಲಾಖೆ ಪತ್ರ ಬರೆದಿದ್ದು, ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರ ಮಾಡಬೇಕೆಂದು ಔಪಚಾರಿಕವಾಗಿ ಮನವಿ ಮಾಡಿತ್ತು.

ನಿಮ್ಮ ದೇಶಕ್ಕೆ ಹಸ್ತಾಂತರ ಮಾಡಿದರೆ ಅವರನ್ನು ಕಾನೂನುಬದ್ಧವಾಗಿ ನಡೆಸಿಕೊಳ್ಳುತ್ತೀರಾ? ಎಂಬ ಪತ್ರಕ್ಕೆ ಉತ್ತರಿಸಿರುವ ಗೃಹ ಇಲಾಖೆ, ಆರೋಪಿಯನ್ನು ದೇಶದ ಕಾನೂನಿನ ಪ್ರಕಾರವೇ ನಡೆಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದೆ.

ಒಂದು ವೇಳೆ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಿದರೆ ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ಜೈಲಿನ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದೇವೆ. ವೈದ್ಯಕೀಯ ಚಿಕಿತ್ಸೆ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸುವ ಆಶ್ವಾಸನೆ ಕೊಡಲಾಗಿದೆ. ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಅಲ್ಲಿನ ಸರ್ಕಾರಕ್ಕೆ ಪ್ರಕರಣ ತನಿಖೆ ನಡೆಸುತ್ತಿರುವ ಸಿಬಿಐ ಮನವಿ ಮಾಡಿಕೊಂಡಿದೆ.

ಐಪಿಸಿ ಸೆಕ್ಷನ್ ೧೨೦ ಬಿ, ೪೦೯, ೪೨೦, ೪೭೭ ಎ, ೨೦೧ ಹಾಗೂ ಭ್ರಷ್ಟಾಚಾರ ತಡೆಕಾಯ್ದೆ ೧೯೯೮ ಅಡಿ ವಿವಿಧ ದೂರುಗಳನ್ನು ಸಿಬಿಐ ದಾಖಲಿಸಿದೆ. ಪತ್ರದಲ್ಲಿ ಮೆಹುಲ್ ಚೋಕ್ಸಿಗೆ ನಿರ್ದಿಷ್ಟ ಸೌಲಭ್ಯ, ವಸತಿ ವ್ಯವಸ್ಥೆ, ವೈದ್ಯಕೀಯ ವೆಚ್ಚ, ಮೇಲ್ವಿಚಾರಣೆ ಕಾರ್ಯ ವಿಧಾನಗಳು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈ ಆರೋಪಿಯನ್ನು ತಕ್ಷಣವೇ ಹಸ್ತಾಂತರಿಸಬೇಕು.

ಆರೋಪಿಯನ್ನು ಮುಂಬೈನ ಅರ್ತೂರು ರಸ್ತೆಯಲ್ಲಿರುವ ಜೈಲಿನಲ್ಲಿ ಇಡಲಾಗುವುದು. ಆದಷ್ಟು ಶೀಘ್ರ ಹಸ್ತಾಂತರ ಮಾಡುವಂತೆ ಸಿಬಿಐ ಕೋರಿದೆ.

Tags:
error: Content is protected !!