Mysore
26
scattered clouds

Social Media

ಶನಿವಾರ, 23 ಮೇ 2026
Light
Dark

ಪಾಕಿಸ್ತಾನದಲ್ಲಿ ಮಜೂದ್‌ ಅಜರ್‌ ಸಹೋದರ ಅನುಮಾನಾಸ್ಪದ ಸಾವು

ಇಸ್ಲಾಮಾಬಾದ್:‌ ಭಾರತದಲ್ಲಿ ಈ ಹಿಂದೆ ನಡೆದಿದ್ದ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಅವರ ಹಿರಿಯ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ಪಾಕಿಸ್ತಾನದಲ್ಲಿ ನಿಗೂಢ ಸಾವನ್ನಪ್ಪಿದ್ದಾನೆ.

ಬಹಾವಲ್ಪುರದಲ್ಲಿ ಕದ್ದುಮುಚ್ಚಿ ಅಂತ್ಯಕ್ರಿಯೆ ನಡೆಸಲಾಗಿದೆ. ಜೈಶ್-ಎ-ಮೊಹಮ್ಮದ್ ಸಂಘಟನೆಯು ತಾಹಿರ್ ಅನ್ವರ್ ಅವರ ಸಾವಿನ ಕುರಿತು ಅಧಿಕೃತ ಮಾಹಿತಿ ನೀಡದೆ ಮೌನ ವಹಿಸಿದೆ. ಸಾವಿನ ನಿಜವಾದ ಕಾರಣ ಇನ್ನೂ ನಿಗೂಢವಾಗಿದೆ. ವೈದ್ಯರಿಂದಲೂ ಸ್ಪಷ್ಟನೆ ಸಿಗದಿರುವುದು ಊಹಾಪೋಹಗಳನ್ನು ಹೆಚ್ಚಿಸಿದೆ.

ಆಪರೇಷನ್ ಸಿಂಧೂರ್ ವೇಳೆ ಬಹಾವಲ್ಪುರದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಮಸೂದ್ ಅಜರ್ ಕುಟುಂಬದ ಹಲವು ಸದಸ್ಯರು ಸಾವನ್ನಪ್ಪಿದ್ದರು. ಆಗ ಬಚಾವಾಗಿದ್ದ ತಾಹಿರ್ ಅನ್ವರ್ ಈಗ ಅನುಮಾನಾಸ್ಪದ ಸಾವನ್ನಪ್ಪಿರುವುದು ಗಮನಾರ್ಹವಾಗಿದೆ. ಪಾಕಿಸ್ತಾನದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಹಲವು ವ್ಯಕ್ತಿಗಳು ನಿಗೂಢ ಸಾವನ್ನಪ್ಪುತ್ತಿದ್ದಾರೆ. ತಾಹಿರ್ ಅನ್ವರ್ ಅವರ ಸಾವೂ ಈ ಸರಣಿಯ ಭಾಗವಾಗಿರುವ ಸಾಧ್ಯತೆ ಇದೆ ಎಂದು ಬೇಹುಗಾರಿಕಾ ಮೂಲಗಳು ಸೂಚಿಸುತ್ತಿವೆ.

Tags:
error: Content is protected !!