Mysore
19
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಮಲೇಷ್ಯಾ ಆಸಿಯಾನ್ ಶೃಂಗ ಸಭೆ : ವರ್ಚುವಲ್ ಆಗಿ ಮೋದಿ ಭಾಗಿ

ಹೊಸದಿಲ್ಲಿ : ಮುಂದಿನ ವಾರ ಮಲೇಷ್ಯಾದಲ್ಲಿ ನಡೆಯಲಿರುವ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ವಿಷಯವನ್ನು ದೂರವಾಣಿ ಕರೆಯಲ್ಲಿ ಮೋದಿ ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರಿಗೆ ಈ ವಿಷಯವನ್ನು ತಿಳಿಸಿದರು. ನನ್ನ ಆತ್ಮೀಯ ಸ್ನೇಹಿತ, ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಆತ್ಮೀಯ ಸಂಭಾಷಣೆ ನಡೆಸಿದೆ. ಮಲೇಷ್ಯಾದ ಆಸಿಯಾನ್ ಅಧ್ಯಕ್ಷತೆಗಾಗಿ ಅವರನ್ನು ಅಭಿನಂದಿಸಿದೆ ಮತ್ತು ಮುಂಬರುವ ಶೃಂಗಸಭೆಗಳ ಯಶಸ್ಸಿಗೆ ಶುಭಾಶಯಗಳನ್ನು ತಿಳಿಸಿದೆ ಎಂದು ಮೋದಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಆಸಿಯಾನ್-ಭಾರತ ಶೃಂಗಸಭೆಯಲ್ಲಿ ವರ್ಚುವಲ್ ಆಗಿ ಸೇರಲು ಮತ್ತು ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸಲು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದರು.

ಇದನ್ನು ಓದಿ: ಕೇದಾರನಾಥ ದೇವಾಲಯ ಬಂದ್

ಆಸಿಯಾನ್ ಸಭೆಗಳು ಅಕ್ಟೋಬರ್ ೨೬-೨೮ರಿಂದ ನಿಗದಿಯಾಗಿವೆ. ಆಸಿಯಾನ್ ಗುಂಪಿನ ಸಂವಾದ ಪಾಲುದಾರರಾದ ಹಲವಾರು ದೇಶಗಳ ನಾಯಕರನ್ನು ಮಲೇಷ್ಯಾ ಆಹ್ವಾನಿಸಿದೆ. ಟ್ರಂಪ್ ಅಕ್ಟೋಬರ್ ೨೬ರಂದು ಎರಡು ದಿನಗಳ ಪ್ರವಾಸಕ್ಕಾಗಿ ಕೌಲಾಲಂಪುರಕ್ಕೆ ಪ್ರಯಾಣಿಸಲಿದ್ದಾರೆ. ೧೯೯೨ ರಲ್ಲಿ ವಲಯ ಪಾಲುದಾರಿಕೆ ಸ್ಥಾಪನೆಯೊಂದಿಗೆ ಆಸಿಯಾನ್-ಭಾರತ ಸಂವಾದ ಸಂಬಂಧಗಳು ಪ್ರಾರಂಭವಾದವು. ಇದು ಡಿಸೆಂಬರ್ ೧೯೯೫ ರಲ್ಲಿ ಪೂರ್ಣ ಸಂವಾದ ಪಾಲುದಾರಿಕೆಗೆ ಮತ್ತು ೨೦೦೨ ರಲ್ಲಿ ಶೃಂಗಸಭೆ ಮಟ್ಟದ ಪಾಲುದಾರಿಕೆಗೆ ಏರಿತು.ಈ ಸಂಬಂಧಗಳನ್ನು ೨೦೧೨ ರಲ್ಲಿ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲಾಯಿತು.

ಭಾರತ ಮತ್ತು ಆಸಿಯಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳು ಕಳೆದ ಕೆಲವು ವರ್ಷಗಳಿಂದ ಗಮನಾರ್ಹ ಏರಿಕೆಯನ್ನು ಕಂಡಿದ್ದು, ವ್ಯಾಪಾರ ಮತ್ತು ಹೂಡಿಕೆ ಹಾಗೂ ಭದ್ರತೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವತ್ತ ಗಮನ ಹರಿಸಲಾಗಿದೆ.

Tags:
error: Content is protected !!