Mysore
23
overcast clouds
Light
Dark

ಲೋಕಸಭಾ ಚುನಾವಣೆ: ನಾಲ್ಕನೇ ಹಂತಹ ಚುನಾವಣೆ ಸುಸೂತ್ರ

ಹೊಸದಿಲ್ಲಿ: ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ  ಇಂದು (ಮೇ.೧೩)ಮುಗಿದಿದ್ದು, ಸಣ್ಣಪುಟ್ಟ ಘರ್ಷಣೆ ಗದ್ದಲದ ನಡುವೆ ಸುಸೂತ್ರವಾಗಿ ನಡೆದಿದೆ.

೧೦ ರಾಜ್ಯಗಳ ೯೬ ಲೋಕಸಭಾ ಕ್ಷೇತ್ರ, ಆಂಧ್ರಪ್ರದೇಶ ವಿಧಾನಸಭೆಯ ಎಲ್ಲಾ ೧೭೫ ಕ್ಷೇತ್ರ ಮತ್ತು ಒಡಿಶಾ ವಿಧಾನಸಭೆಯ ೨೮ ಕ್ಷೇತ್ರಗಳಿಗೆ ಮತದಾನ ನಡೆಯಿತು. ಎಲ್ಲಾ ಕ್ಷೇತ್ರಗಳು  ಶೇ. ೬೨.೯ರಷ್ಟು ಮತದಾನವಾಗಿದೆ.

ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಿತು. ಇದರೊಂದಿಗೆ ಅತೀ ಹೆಚ್ಚು ಮತದಾನ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಕಡಿಮೆ ಮತದಾನ ಬಿಹಾರದಲ್ಲಿ ದಾಖಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಉತ್ಸಹದ ಹಕ್ಕು ಚಲಾವಣೆ ನಡುವೆ ಕೆಲವು ಹಿಂಸಚಾರ ನಡೆದಿದೆ ಎಂದು ವರದಿಯಾಗಿದೆ.