ಚೆನ್ನೈ: ನಟ ವಿಜಯ್ ಅವರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಕರೂರಿನಲ್ಲಿ ಸಂಭವಿಸಿದ್ದ ಭೀಕರ ಕಾಲ್ತುಳಿತ ದುರಂತದಲ್ಲಿ ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.
ಮೃತಪಟ್ಟಿರುವ 41 ಜನರಲ್ಲಿ 35 ಜನರ ಗುರುತು ಪತ್ತೆಯಾಗಿದೆ. ಈರೋಡ್, ತಿರುಪುರ, ಧಾರಾಪುರಂ ಜಿಲ್ಲೆಯ ತಲಾ ಇಬ್ಬರು ಮೃತಪಟ್ಟಿದ್ದಾರೆ. ಕರೂರು ಜಿಲ್ಲೆಯವರೇ ಆದ 28 ಜನರು ಸಾವನ್ನಪ್ಪಿದ್ದಾರೆ. ಸೇಲಂನ ಓರ್ವ ಸಾವನ್ನಪ್ಪಿದ್ದಾರೆ.
ಇದನ್ನು ಓದಿ : ಕಾಲ್ತುಳಿತ | ನಟ ವಿಜಯ್ ತಪ್ಪಿಲ್ಲ, ಡಿಎಂಕೆ ಸರ್ಕಾರ ದೂಷಿಸಿದೆ ಬಿಜೆಪಿ ; ಪರಿಹಾರ ಘೋಷಣೆ
ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರಲ್ಲಿ ಕರೂರು ಜಿಲ್ಲೆಯವರೇ ಹೆಚ್ಚಿದ್ದಾರೆ. ಉಳಿದವರ ಗುರುತು ಪತ್ತೆಕಾರ್ಯ ನಡೆಸಲಾಗುತ್ತಿದೆ. ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಅವರಿಗೆ ನಿನ್ನೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ತಮಿಳುನಾಡಿನ ಚೆನ್ನೈನಲ್ಲಿರುವ ಅವರ ನಿವಾಸಕ್ಕೆ ಭದ್ರತೆ ಹೆಚ್ಚಳ ಮಾಡಲಾಗಿದೆ.
ಕರೂರಿನಲ್ಲಿ ಅವರ ರ್ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಳ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದ್ದು, ಘಟನೆಯಿಂದ ನಟ ವಿಜಯ್ ತೀವ್ರ ಬೇಸರಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





