Mysore
19
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕರೂರ್‌ ಕಾಲ್ತುಳಿತ ದುರಂತ ಪ್ರಕರಣ: ನಾಳೆ ನಟ ವಿಜಯ್‌ರಿಂದ ಸಂತ್ರಸ್ತ ಕುಟುಂಬಗಳ ಭೇಟಿ

karuru tamil actor vijay

ಚೆನ್ನೈ: ತಮಿಳುನಾಡಿನ ಕರೂರ್‌ನಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರಂತದ ಒಂದು ತಿಂಗಳ ನಂತರ ನಟ ಹಾಗೂ ರಾಜಕಾರಣಿ ವಿಜಯ್‌ ಅವರು ನಾಳೆ ಸಂತ್ರಸ್ತರ ಕುಟುಂಬಗಳನ್ನು ಖಾಸಗಿಯಾಗಿ ಭೇಟಿ ಮಾಡಲಿದ್ದಾರೆ.

ಭೇಟಿಯ ಸಭೆಯು ಮಲ್ಲಪುರಂನ ಹೋಟೆಲ್‌ನಲ್ಲಿ ನಡೆಯಲಿದ್ದು, ಮಾಧ್ಯಮ ಸಿಬ್ಬಂದಿ ಅಥವಾ ಪಕ್ಷದ ಸದಸ್ಯರಿಗೆ ಈ ಕಾರ್ಯಕ್ರಮಕ್ಕೆ ಹಾಜರಾಗಲು ಅವಕಾಶವಿಲ್ಲ.

ಈ ಹಿಂದೆ ನಟ ವಿಜಯ್‌ ಅವರು ವಿಡಿಯೋ ಕರೆಗಳ ಮೂಲಕ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳನ್ನು ವೈಯಕ್ತಿಕವಾಗಿ ತಲುಪಲು ಪ್ರಾರಂಭಿಸಿದ್ದರು.

ಇದನ್ನು ಓದಿ: ಮಾರುಕಟ್ಟೆಗಳಲ್ಲಿ ಸ್ಥಳೀಯ ವಸ್ತುಗಳ ಖರೀದಿ ಹೆಚ್ಚಳ: ಪ್ರಧಾನಿ ನರೇಂದ್ರ ಮೋದಿ ಸಂತಸ

ಕಳೆದ ಸೆಪ್ಟೆಂಬರ್.‌27ರಂದು ವಿಜಯ್‌ ರ್ಯಾಲಿಯ ಸಮಯದಲ್ಲಿ ಸಂಭವಿಸಿದ ದುರಂತವು 41 ಜನರನ್ನು ಬಲಿ ತೆಗೆದುಕೊಂಡಿತ್ತು. ಘಟನೆಯಲ್ಲಿ ನೂರನ್ನೂ ಹೆಚ್ಚು ಜನರು ಗಾಯಗೊಂಡಿದ್ದರು.

ಬಳಿಕ ಸಂತ್ರಸ್ತರ ಕುಟುಂಬದವರೊಂದಿಗೆ ವಿಜಯ್‌ ಅವರ ಪ್ರತಿಯೊಂದು ಕರೆಗಳು ಸುಮಾರು 20 ನಿಮಿಷಗಳ ಕಾಲ ನಡೆದವು. ಈ ಸಮಯದಲ್ಲಿ ಅವರು ಆಳವಾದ ಸಂತಾಪ ವ್ಯಕ್ತಪಡಿಸಿದ್ದರು.

ಕುಟುಂಬಗಳಿಗೆ ಸಹಾಯದ ಭರವಸೆ ಕೂಡ ನೀಡಿದ್ದರು. ಘಟನೆಯ ಒಂದು ದಿನದ ನಂತರ ನಟ ಹಾಗೂ ರಾಜಕಾರಣಿ ವಿಜಯ್‌ ಅವರು ಪ್ರತಿ ಮೃತರ ಕುಟುಂಬಕ್ಕೆ ತಲಾ 20 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು.

Tags:
error: Content is protected !!