ನವದೆಹಲಿ: ರಾಜ್ಯಸಭೆಯಲ್ಲಿಂದು ವಕ್ಫ್ ಮಸೂದೆ ಕುರಿತಾದ ಜಂಟಿ ಸಂಸತ್ ಸಮಿತಿಯ ವರದಿಯನ್ನು ಮಂಡಿಸಲಾಯಿತು.
ಬಿಜೆಪಿ ಸಂಸದೆ ಮೇಧಾ ವಿಶ್ರಮ್ ಕುಲಕರ್ಣಿ ಅವರಿಂದು ವರದಿಯನ್ನು ಮಂಡಿಸಿದರು. ವರದಿ ಮಂಡಿಸಿದ ನಂತರ ವಿರೋಧ ಪಕ್ಷದ ಸದಸ್ಯರು ಗದ್ದಲ, ಕೋಲಾಹಲ ಎಬ್ಬಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಜಗದೀಪ್ ಧನಕರ್ ಅವರು, ಭಾರತದ ರಾಷ್ಟ್ರಪತಿಗಳಿಗೆ ಅಗೌರವ ತೋರಿಸಬೇಡಿ. ಮಲ್ಲಿಕಾರ್ಜುನ ಖರ್ಗೆ ಅವರು ವಿರೋಧ ಪಕ್ಷದ ಸದಸ್ಯರಿಗೆ ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳುವಂತೆ ಹೇಳಬೇಕು ಎಂದು ಒತ್ತಾಯಿಸಿದರು.
ಆದರೂ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಿ ಕಲಾಪದಲ್ಲಿ ಗದ್ದಲ ಸೃಷ್ಟಿಸಿದರು.