ಗಾಜಾ : ಗಾಜಾ ನಗರದ ಮೇಲೆ ಬುಧವಾರ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು, 27 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮವನ್ನು ಉಲ್ಲಂಘಿಸಿವೆ ಎಂದು ಎರಡು ದೇಶಗಳು ಪರಸ್ಪರ ಆರೋಪಿಸಿವೆ.
ಎರಡು ದೇಶಗಳ ನಡುವೆ ಕಳೆದ ತಿಂಗಳು ಕದನ ವಿರಾಮ ಜಾರಿಗೆ ಬಂದ ನಂತರ ಗಾಜಾದಲ್ಲಿ ನಡೆದ ಅತ್ಯಂತ ಮಾರಕ ದಾಳಿಗಳಲ್ಲಿ ಇದು ಸಹ ಒಂದು. ಕದನ ವಿರಾಮದ ಹೊರತಾಗಿ ಇಸ್ರೇಲ್ ಲೆಬನಾನ್‌ನ ಹಿಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸರಣಿ ದಾಳಿಗಳನ್ನು ಘೋಷಿಸಿದ ನಂತರ ಈ ದಾಳಿ ನಡೆದಿದೆ.
ಬುಧವಾರ ಉತ್ತರ ಗಾಜಾ ನಗರದಲ್ಲಿ 14 ಜನರು ಮತ್ತು ದಕ್ಷಿಣದ ಖಾನ್ ಯೂನಿಸ್ ಪ್ರದೇಶದಲ್ಲಿ 13 ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರದೇಶದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:-ಕದನ ವಿರಾಮ ನಡುವೆಯೇ ಗಾಜಾ ಮೇಲೆ ಇಸ್ರೇಲ್ ಬಾಂಬ್ ದಾಳಿ : 27 ಮಂದಿ ಸಾವು
ಕದನ ವಿರಾಮ ಉಲ್ಲಂಘಿಸಿ ಹಮಾಸ್ ಉಗ್ರರು ಇಸ್ರೇಲ್ ಸೇನಾಪಡೆ ಕಾರ್ಯ ನಿರ್ವಹಿಸುತ್ತಿದ್ದ ಪ್ರದೇಶದ ಮೇಲೆ ದಾಳಿ ನಡೆಸಿದೆ ಎಂದು ಇಸ್ರೇಲ್ ತಿಳಿಸಿದೆ. ಈ ಆರೋಪ ನಿರಾಕರಿಸಿರುವ ಹಮಾಸ್, ಈ ಇಸ್ರೇಲ್ ಅಪಾಯಕಾರಿ ದಾಳಿ ನಡೆಸಿದೆ ಎಂದು ಆರೋಪಿಸಿದೆ. ಈ ದಾಳಿಯು ಕದನ ವಿರಾಮವನ್ನು ಅಪಾಯಕ್ಕೆ ಸಿಲುಕಿಸಬಹುದು.
ಕದನ ವಿರಾಮದಲ್ಲೂ ಇಸ್ರೇಲ್, ಹಮಾಸ್ ಅನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ ಎಂದು ಹೇಳಿ ಪದೇ ಪದೆ ದಾಳಿ ನಡೆಸುತ್ತಿದೆ. ಪರಿಣಾಮವಾಗಿ 280 ಕ್ಕೂ ಹೆಚ್ಚು ಪ್ಯಾಲೆಸ್ಟೇನಿಯನ್ನರು ಸಾವನ್ನಪ್ಪಿದ್ದಾರೆ. ಎರಡು ದೇಶಗಳ ನಡುವೆ ಅಮೆರಿಕ ಮಧ್ಯಸ್ಥಿಕೆಯನ್ನು ಆಧರಿಸಿ ಒಪ್ಪಂದವಾಗಿದೆ. ಹಮಾಸ್ ಉಗ್ರರು ಒತ್ತಾಯಾಳಾಗಿರಿಸಿದ್ದ 48 ಮಂದಿಯನ್ನು ಇಸ್ರೇಲ್‌ಗೆ ಹಿಂದಿರುಗಿಸುವುದಕ್ಕೆ ಹಮಾಸ್ ಸಮ್ಮತಿ ನೀಡಿತ್ತು.





