ಟೆಹ್ರಾನ್: ಅಮೇರಿಕಾ ದಾಳಿಗೂ ಕೊಂಚವೂ ಜಗ್ಗದ ಇರಾನ್ ದೇಶ ಇಸ್ರೇಲ್ ಮೇಲೆ ದಾಳಿ ಮುಂದುವರಿಸಿದೆ. ಇರಾನ್‌ನ 3ಕ್ಕೂ ಹೆಚ್ಚು ಸ್ಥಳಗಳ ಮೇಲೆ ಅಮೇರಿಕಾ 30ಕ್ಕೂ ಅಧಿಕ ಖಂಡಾಂತರ ಕ್ಷಿಪಣಿಗಳಿಂದ ದಾಳಿ ನಡೆಸಿದೆ.
ಅಮೇರಿಕಾ ದಾಳಿ ಬಳಿಕ ಇರಾನ್‌ನ ಮೊದಲ ಪ್ರತೀಕಾರ ಇದಾಗಿದ್ದು, ಇಸ್ರೇಲ್ ಮೇಲೆ ಇರಾನ್‌ನ ಮಿಸೈಲ್‌ಗಳು ಅಪ್ಪಳಿಸಿವೆ. ಇರಾನ್ ಮಿಸೈಲ್‌ಗಳು ಅಪ್ಪಳಿಸುತ್ತಿದ್ದಂತೆ ಇಸ್ರೇಲ್‌ನ ಕೆಲವು ಭಾಗಗಳಲ್ಲಿ ಸೈರನ್ ಮೊಳಗಿದೆ. ನಾಗರಿಕರನ್ನು ಸುರಕ್ಷಿತ ಸ್ಥಳಗಳು ಹಾಗೂ ಬಂಕರ್‌ಗಳಿಗೆ ಸ್ಥಳಾಂತರಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಬಂಕರ್‌ಗಳಿಂದ ಆಚೆ ಬರದಂತೆ ಸೂಚನೆ ನೀಡಲಾಗಿದೆ.
ಇನ್ನು ನಾಗರಿಕರನ್ನು ಗುರಿಯಾಗಿಸಿ ಇರಾನ್ ನಡೆಸಿದ ದಾಳಿಯಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಮೇರಿಕಾ ದಾಳಿಗೂ ಜಗ್ಗದ ಇರಾನ್, ಇಸ್ರೇಲ್‌ನ ಹೈಫಾ ನಗರ, ರಾಜಧಾನಿ ಟೆಲ್ ಅವೀವ್, ಜೆರುಸೇಲಂ ಸೇರಿದಂತೆ 10ಕ್ಕೂ ಹೆಚ್ಚು ನಗರಗಳ ಮೇಲೆ ಮಿಸೈಲ್ ದಾಳಿ ಮಾಡಿದೆ. ಮಿಸೈಲ್ ದಾಳಿಯಿಂದ ಇಸ್ರೇಲ್‌ನ ಗಗನಚುಂಬಿ ಕಟ್ಟಡಗಳೇ ಧ್ವಂಸವಾಗಿದ್ದು, ಇರಾನ್ ಮೇಲೆ ಇಸ್ರೇಲ್ ಮತ್ತೆ ದಾಳಿ ನಡೆಸಲು ಸಜ್ಜಾಗಿದೆ.





