Mysore
22
clear sky

Social Media

ಸೋಮವಾರ, 20 ಏಪ್ರಿಲ 2026
Light
Dark

ಅಮೇರಿಕಾ-ಇಸ್ರೇಲ್‌ ದಾಳಿಯಲ್ಲಿ ಇರಾನ್‌ ಗುಪ್ತಚರ ಮುಖ್ಯಸ್ಥ ಮಜೀದ್‌ ಖಾದೇಮಿ ಹತ್ಯೆ

ಟೆಹರಾನ್:‌ ಅಮೇರಿಕಾ-ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ ರೆವಲ್ಯೂಷನರಿ ಗಾರ್ಡ್‌ ಕಾಪ್ಸ್‌ ಗುಪ್ತಚರ ಮುಖ್ಯಸ್ಥ ಮಜೀದ್‌ ಖಾದೇಮಿ ಹತ್ಯೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇರಾನ್‌ ದಾಳಿಗೆ ಪ್ರತೀಕಾರವಾಗಿ ಇಂದು ಟೆಹರಾನ್‌ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಅಮೇರಿಕಾ ಮತ್ತು ಇಸ್ರೇಲ್‌ ಸತತವಾಗಿ ವಾಯುದಾಳಿ ನಡೆಸುತ್ತಿವೆ.

ಇದರಿಂದ ಘರ್ಷಣೆ ತೀವ್ರ ಸ್ವರೂಪ ಪಡೆದುಕೊಂಡಿರುವ ನಡುವೆ ಗುಪ್ತಚರ ಮುಖ್ಯಸ್ಥನ ಹತ್ಯೆಯಾಗಿದೆ.

ಕಳೆದ ಜೂನ್‌ ತಿಂಗಳಿನಲ್ಲಿ ನಡೆದಿದ್ದ 12 ದಿನಗಳ ಯುದ್ಧದ ವೇಳೆ ಇಸ್ರೇಲ್‌, ಜನರಲ್‌ ಮೊಹಮ್ಮದ್‌ ಕಜೆಮಿ ಅವರನ್ನು ಹತ್ಯೆ ಮಾಡಿತ್ತು. ಆ ಬಳಿಕ ಖಾದೇಮಿ ಗುಪ್ತಚರ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದರು.

 

Tags:
error: Content is protected !!