ವಿಶ್ವಸಂಸ್ಥೆ: ಜಗತ್ತಿನ ಜನಸಂಖ್ಯೆ ನಾಗಲೋಟದಿಂದ ಏರುತಿದ್ದು, ಪ್ರಸ್ತುತ 820 ಕೋಟಿ ಇರುವ ಜನಸಂಖ್ಯೆ 2028ರ ಹೊತ್ತಿಗೆ 1.000ಕೋಟಿ ದಾಟಲಿದೆ ಎಂದು ಗುರುವಾರ(ಜು.11) ಬಿಡುಗಡೆಯಾದ ವಿಶ್ವಸಂಸ್ಥೆಯ ದಿ ವರ್ಲ್ಡ್ ಪಾಪ್ಯೂಲೇಶನ್ ಪ್ರಾಸ್ಟೆಕ್ಟ್ 2024 ರ ವರದಿ ತಿಳಿಸಿದೆ.
2060ರ ಹೊತ್ತಿಗೆ ಭಾರತದ ಜನಸಂಖ್ಯೆ 170ಕೋಟಿ ದಾಟಲಿದ್ದು, ನಂತರ ಅದು ಶೇ.12ರಷ್ಟು ಇಳಿಯುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.
21ನೇ ಶತಮಾನದುದ್ದಕ್ಕೂ ಅಂದರೆ 2100 ರವರೆಗು ಭಾರತವು ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಉಳಿಯಲಿದೆ. ಆದರೆ 2100ರ ಅಂತ್ಯದ ವೇಳೆಗೆ ವಿಶ್ವದ ಜನಸಂಖ್ಯೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.
ಪ್ರಸ್ತುತ ಭಾರತ ಜನಸಂಖ್ಯೆ 145 ಕೋಟಿಗೇರಿದೆ. ಕಳೆದ ವರ್ಷವೇ ಭಾರತ ಚೀನವನ್ನು ಮೀರಿ ವಿಶ್ವದಲ್ಲೇ ಗರಿಷ್ಠ ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಏರಿಕೆ ಹೀಗೆ ಮುಂದುವರೆದರೆ 2060 ರ ಹೊತ್ತಿಗೆ 170 ಕೋಟಿ ದಾಟಲಿದೆ ಎಂದು ವರದಿ ಹೇಳಿದೆ.