Mysore
25
overcast clouds
Light
Dark

ಸಿಎಎ ಕಾಯ್ದೆಯಡಿ ೧೪ ಮಂದಿಗೆ ಭಾರತದ ಪೌರತ್ವ

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಯಡಿ(ಸಿಎಎ) ಇದೇ ಮೊದಲ ಬಾರಿಗೆ ೧೪ ಮಂದಿಗೆ ಭಾರತದ ಪೌರತ್ವ ನೀಡಲಾಗಿದೆ.

ಇಂದು(ಮೇ.೧೫) ಸಿಎಎ ಕಾಯ್ದೆಯಡಿ ಮೊಟ್ಟ ಮೊದಲ ಬಾರಿಗೆ ಭಾರತದ ಪೌರತ್ವಗಳಿಸಿರುವ ೧೪ ಮಂದಿಗೆ ಕೇಂದ್ರ ಸರ್ಕಾರ ಪ್ರಮಾಣ ಪತ್ರ ವಿತರಿಸಿದೆ. ಆ ಮೂಲಕ ಕೇಂದ್ರ ಸರ್ಕಾರವು ಕಾಯ್ದೆ ಜಾರಿಗೊಳಿಸುವ ಬಗ್ಗೆ ತನ್ನ ನಿಲುವಿಗೆ ಬದ್ಧವಾಗಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಮುಸ್ಲಿಮೇತರ ೧೪ ಜನರಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುವಾರ್ ಭಲ್ಲಾ ಅವರು ಪ್ರವಾಣ ಪತ್ರ ಹಸ್ತಾಂತರಿಸಿದ್ದಾರೆ. ಆ ಮೂಲಕ ವಲಸಿಗರಲ್ಲಿ ಪೌರತ್ವದ ಭರವಸೆ ಮೂಡಿಸಿದ್ದಾರೆ. ಪೌರತ್ವ ಪಡೆದವರಲ್ಲಿ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ನರು ಸೇರಿದ್ದಾರೆ. ‌

ಸಿಎಎ ಕಾಯ್ದೆಯಡಿ ಭಾರತದ ಪೌರತ್ವ ಪಡೆಯುವ ಅರ್ಹತಾ ಅವಧಿಯನ್ನು ೧೧ ವರ್ಷಗಳಿಂದ ೫ ವರ್ಷಕ್ಕೆ ಇಳಿಸಲಾಗಿದೆ. ಈ ಕಾಯ್ದೆ ಅನ್ವಯ ೨೦೧೪ ಡಿಸೆಂಬರ್ ೩೧ರ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಮುಸ್ಲಿಮೇತರರು ಪೌರತ್ವಕ್ಕೆ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ವೊಂದನ್ನು ಆರಂಭಿಸಲಾಗಿತ್ತು.