ಇಸ್ಲಾಮಾಬಾದ್: ಭಾರತವು ಝೀಲಂ ನದಿಗೆ ನೀರು ಹರಿಬಿಟ್ಟ ಪರಿಣಾಮ ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಭಾರತವು ಝೀಲಂ ನದಿಗೆ ನೀರು ಹರಿಸಿದ ಪರಿಣಾಮ ಮುಜಾಫರಾಬಾದ್ ಬಳಿ ನೀರಿನ ಮಟ್ಟ ಹೆಚ್ಚಾಗಿದೆ.
ಪರಿಣಾಮ ಅಲ್ಲಿನ ಸ್ಥಳೀಯ ಆಡಳಿತ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಮಸೀದಿಗಳಲ್ಲಿ ಪ್ರಕಟಣೆ ಹೊರಡಿಸಿ ಜನರಿಗೆ ಎಚ್ಚರಿಕೆ ನೀಡಿದೆ.
ಈ ನಡುವೆ ಪಾಕ್ ಮಾಧ್ಯಮಗಳು ಭಾರತದ ವಿರುದ್ಧ ಕಿಡಿಕಾರಿದ್ದು, ಭಾರತವು ಉದ್ದೇಶಪೂರ್ವಕವಾಗಿ ಭಯೋತ್ಪಾದನೆಯಲ್ಲಿ ತೊಡಗಿದೆ ಎಂದು ಆರೋಪಿಸಿವೆ.
ಇನ್ನು ಹಟ್ಟಿಯನ್ ಬಾಲಾದಲ್ಲಿ ಆಡಳಿತವು ತಾತ್ಕಾಲಿಕ ಕೇಂದ್ರಗಳನ್ನು ಸ್ಥಾಪಿಸಿದ್ದು, ಪ್ರವಾಹದಿಂದ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಕಿಡಿಕಾರಿದೆ.




