Mysore
20
haze

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದ : ಉಭಯ ದೇಶಗಳಿಗೂ ಶಕ್ತಿ ; ಮೋದಿ ಬಣ್ಣನೆ

ಒಮಾನ್ : ಭಾರತ ಮತ್ತು ಒಮಾನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವಿಶ್ವಾಸ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಭಾರತ -ಒಮಾನ್ ವ್ಯಾಪಾರ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಈ ಶೃಂಗಸಭೆಯು ಭಾರತ ಮತ್ತು ಒಮಾನ್ ಸಹಭಾಗಿತ್ವಕ್ಕೆ ಹೊಸ ನಿರ್ದೇಶನ ನೀಡಲಿದೆ. ಇಂದು ನಾವು ಐತಿಹಾಸಿಕ ನಿರ್ಧಾರಕ್ಕೆ ಬಂದಿದ್ದು, ಮುಂಬರುವ ಹಲವು ದಶಕಗಳವರೆಗೆ ಈ ತೀರ್ಮಾನದ ಪ್ರತಿಧ್ವನಿ ಇರಲಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ, ಅಂದರೆ ಸಿಇಪಿಎ, ೨೧ನೇ ಶತಮಾನದಲ್ಲಿ ನಮ್ಮ ಪಾಲುದಾರಿಕೆಗೆ ಹೊಸ ವಿಶ್ವಾಸ ಮತ್ತು ಹೊಸ ಶಕ್ತಿಯನ್ನು ನೀಡುತ್ತದೆ ಎಂದಿದ್ದಾರೆ.

ಇದನ್ನೂ ಓದಿ:-ನೇಮಕಾತಿ ವಿಳಂಬ | ಪ್ರತಿಧ್ವನಿಸಿದ ಪ್ರತಿಭಟನೆಗಳು

ಭಾರತವೂ ಸದಾ ಪ್ರಗತಿ ಮತ್ತು ಸ್ವಾವಲಂಬಿಯಾಗಿದ್ದು, ಭಾರತದ ಬೆಳವಣಿಗೆಯು ಸ್ನೇಹಿತ ದೇಶಗಳ ಬೆಳವಣಿಗೆಗೆ ಕೂಡ ಕಾರಣವಾಗಿದೆ. ಭಾರತವೂ ದೇಶದ ಮೂರನೇ ಆರ್ಥಿಕ ದೇಶವಾಗುವತ್ತ ಸಾಗಿದೆ. ಇದು ಇಡೀ ಜಗತ್ತಿಗೆ ಪ್ರಯೋಜನಕಾರಿಯಾಗಲಿದೆ. ಒಮನ್‌ಗೆ ಮತ್ತಷ್ಟು ಸಹಾಯಕವಾಗಲಿದೆ. ನಮ್ಮ ಜನರು ಪರಸ್ಪರರ ಬಗ್ಗೆ ತಿಳಿದಿದ್ದಾರೆ. ವ್ಯಾಪಾರ ಸಂಬಂಧದಲ್ಲಿ ನಾವು ನಂಬಿಕೆಯನ್ನು ಹೊಂದಿದ್ದು, ಪರಸ್ಪರ ಮಾರುಕಟ್ಟೆಗಳನ್ನು ಅರಿತಿದ್ದೇವೆ ಎಂದು ಮೋದಿ ತಿಳಿಸಿದರು.

Tags:
error: Content is protected !!