Mysore
25
haze

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಭಾರತ ದೇಶ ಪ್ರಜಾಪ್ರಭುತ್ವದ ತಾಯಿ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ನಮ್ಮ ಏಕತೆಗೆ ಸಂವಿಧಾನವೇ ಆಧಾರ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಬಣ್ಣಿಸಿದ್ದಾರೆ.

ಈ ಬಗ್ಗೆ ಲೋಕಸಭೆಯಲ್ಲಿಂದು ಮಾತನಾಡಿದ ಅವರು, ದೇಶದ ಪ್ರಾಚೀನ ಪ್ರಜಾಪ್ರಭುತ್ವದ ಬೇರುಗಳು ಬಹಳ ಹಿಂದಿನಿಂದಲೂ ಜಗತ್ತಿಗೆ ಸ್ಪೂರ್ತಿಯಾಗಿದೆ.

1949ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ನಂತರ ಭಾರತದ ಪ್ರಯಾಣವನ್ನು ಅಸಾಧಾರಣ ಎಂದು ಮೋದಿ ಬಣ್ಣಿಸಿದರು.

ಭಾರತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮಾತ್ರವಲ್ಲ, ಪ್ರಜಾಪ್ರಭುತ್ವದ ತಾಯಿ. 2047ರ ವೇಳೆಗೆ ದೇಶ ಅಭಿವೃದ್ಧಿ ಹೊಂದಿದ ದೇಶವಾಗಲು ಸಂಕಲ್ಪ ಮಾಡಲಾಗಿದೆ. ಈ ಗುರಿಯನ್ನು ಸಾಧಿಸಲು ಅದರ ಏಕತೆ ಅತಿದೊಡ್ಡ ಅವಶ್ಯಕತೆಯಾಗಿದೆ. ಸಂವಿಧಾನವೇ ನಮ್ಮ ಏಕತೆಗೆ ಆಧಾರವಾಗಿದೆ ಎಂದರು.

ಇನ್ನು ಸ್ವಾತಂತ್ರ್ಯ ನಂತರ ಭಾರತವು ತನ್ನ ಪ್ರಜಾಸತ್ತಾತ್ಮಕ ಭವಿಷ್ಯದ ಬಗ್ಗೆ ಎಲ್ಲಾ ಆತಂಕಗಳನ್ನು ಬದಿಗಿರಿಸಿದೆ. ಸಂವಿಧಾನವು ಇಂದು ದೇಶವನ್ನು ಈ ಹಂತಕ್ಕೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಂವಿಧಾನ ರಚಿಸಿದವರ ಸ್ಪೂರ್ತಿಗೆ ತಕ್ಕಂತೆ ಬದುಕುತ್ತಿರುವುದಕ್ಕೆ ಸಂವಿಧಾನ ರಚನಾಕಾರರು ಮತ್ತು ದೇಶದ ಪ್ರಜೆಗಳಿಗೆ ಗೌರವ ಸಲ್ಲಿಸಿದರು.

ಪುರುಷೋತ್ತಮ ದಾಸ್‌ ಟಂಡನ್‌ ಹಾಗೂ ಭೀಮ್‌ ರಾವ್‌ ಅಂಬೇಡ್ಕರ್‌ ಅವರಂತಹ ಗಣ್ಯ ವ್ಯಕ್ತಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಂವಿಧಾನ ರಚನೆಯಲ್ಲಿ ತೊಡಗಿದ್ದವರಿಗೆ ಭಾರತವು 1947ರಲ್ಲಿ ಹುಟ್ಟಿಲ್ಲ ಅಥವಾ 1950ರಲ್ಲಿ ಪ್ರಜಾಪ್ರಭುತ್ವಕ್ಕೆ ತಿರುಗಿಲ್ಲ ಎಂದು ತುಂಬಾ ಚೆನ್ನಾಗಿ ತಿಳಿದಿತ್ತು ಎಂದರು.

ಸಂವಿಧಾನವು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ್ದು, ದೇಶ ಈಗ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ನೋಡುತ್ತಿದೆ. ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಕಾನೂನನ್ನು ಸರ್ವಾನುಮತದಿಂದ ಅಂಗೀಕರಿಸಿದ್ದಕ್ಕಾಗಿ ಸಂಸದರನ್ನು ಶ್ಲಾಘಿಸಿದರು.

 

Tags: