Mysore
30
scattered clouds

Social Media

ಶನಿವಾರ, 02 ನವೆಂಬರ್ 2024
Light
Dark

ರಕ್ಷಣಾ ಕ್ಷೇತ್ರದಲ್ಲಿ ಭಾರತ-ಸಿಂಗಾಪುರ ಪರಸ್ಪರ ಒಪ್ಪಂದ

ನವದೆಹಲಿ: ಭಾರತ ಮತ್ತು ಸಿಂಗಾಪುರ ದೇಶಗಳ ನಡುವೆ ರಕ್ಷಣಾ ಕ್ಷೇತ್ರದ ವಿಚಾರವಾಗಿ ಪರಸ್ಪರ ಸಹಕಾರ ನೀಡುವ ಸಲುವಾಗಿ ಎರಡು ಉಭಯ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ರಕ್ಷಣಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಮತ್ತು ರಕ್ಷಣಾ ಸಾಮಗ್ರಿಗಳ ಉತ್ಪಾದನೆಯನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಈ ಎರಡು ದೇಶಗಳು ಪರಸ್ಪರ ಸಹಕಾರವನ್ನು ವ್ಯಕ್ತಪಡಿಸುತ್ತವೆ. ಹೀಗಾಗಿ ಯಾಂತ್ರೀಕೃತ ಹಾಗೂ ಕೃತಕ ಬುದ್ಧಿಮತ್ತೆಯನ್ನು ಉತ್ತೇಜಿಸುವ ಸಲುವಾಗಿ ಆರನೇ ಭಾರತ-ಸಿಂಗಾಪುರ ರಕ್ಷಣಾ ಸಂವಾದ ಕಾರ್ಯಕ್ರಮದಲ್ಲಿ ಈ ಮಾತುಕತೆ ನಡೆಸಲಾಗಿದೆ. ಉಭಯ ದೇಶಗಳ ಜಂಟಿ ಮಿಲಿಟರಿ ತರಬೇತಿ ಸೇನೆಯ ದ್ವಿಪಕ್ಷೀಯ ಒಪ್ಪಂದವನ್ನು ಮುಂದಿನ ಐದು ವರ್ಷಗಳವರೆಗೂ ವಿಸ್ತರಿಸಲು ತೀರ್ಮಾನಿಸುವ ಮುಖಾಂತರ ಒಪ್ಪಂದ ಮಾಡಿಕೊಂಡಿವೆ ಎಂದು ಹೇಳಲಾಗಿದೆ.

ಇನ್ನು ಸೈಬರ್‌ ಭದ್ರತೆಯ ಕ್ಷೇತ್ರಗಳಲ್ಲಿಯೂ ಸಹಕಾರವನ್ನು ಮುಂದುವರಿಸಲು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಸಿಂಗಾಪುರ ರಕ್ಷಣಾ ಸಚಿವ ಎನ್.ಜಿ.ಇಂಗ್‌ ಹೆನ್‌ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

Tags: