Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮನ್‌ ಕಿ ಬಾತ್‌ನಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪಗೆ ಪ್ರಧಾನಿ ಮೋದಿ ನಮನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಮನ್‌ ಕಿ ಬಾತ್‌ನಲ್ಲಿ ಇತ್ತೀಚೆಗಷ್ಟೇ ನಿಧನರಾದ ಕನ್ನಡದ ಹಿರಿಯ ಸಾಹಿತಿ ಎಸ್.‌ಎಲ್‌.ಭೈರಪ್ಪ ಅವರ ಸಾಧನೆಯನ್ನು ಸ್ಮರಿಸಿದ್ದಾರೆ.

ಮನ್‌ ಕಿ ಬಾತ್‌ 126ನೇ ಸಂಚಿಕೆಯಲ್ಲಿ ಎಸ್.ಎಲ್.‌ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ನಾವೆಲ್ಲಾ ದೇಶ ಕಂಡ ಮಹಾನ್‌ ವಿಚಾರವಾಗಿ ಹಾಗೂ ಚಿಂತಕ ಎಸ್.‌ಎಲ್‌.ಭೈರಪ್ಪ ಅವರನ್ನು ಕಳೆದುಕೊಂಡಿದ್ದೇವೆ. ಅವರೊಂದಿಗೆ ವ್ಯಕ್ತಿಗತ ಸಂಪರ್ಕ ಹೊಂದಿದ್ದೆ. ಅನೇಕ ಸಂದರ್ಭಗಳಲ್ಲಿ ಹಲವು ವಿಚಾರಗಳ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:-ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಿಥುನ್‌ ಮನ್ಹಾಸ್‌, ಕಾರ್ಯದರ್ಶಿಯಾಗಿ ದೇವಜಿತ್‌ ಸೈಕಿಯಾ ನೇಮಕ

ಇನ್ನು ಭೈರಪ್ಪ ಅವರ ಅನೇಕ ಕೃತಿಗಳು ಹಲವಾರು ಭಾಷೆಗಳಿಗೆ ಅನುವಾದವಾಗಿದೆ. ನಮ್ಮ ಮೂಲ ಸಂಸ್ಕೃತಿಯ ಬಗ್ಗೆ ಹೆಮ್ಮೆ ಇರಬೇಕು. ಗೌರವ ತೋರಿಸಬೇಕು ಎಂಬುದನ್ನು ಅವರು ನಮಗೆ ಕಲಿಸಿ ಕೊಟ್ಟಿದ್ದಾರೆ. ಅವರ ಅಗಲಿಕೆಗೆ ಭಾವುಕ ವಿದಾಯ ಹೇಳುತ್ತೇನೆ. ಭೈರಪ್ಪ ಅವರೊಂದಿಗಿನ ಒಡನಾಟ ಪ್ರೇರಣದಾಯಕ. ಅವರ ಕೃತಿಗಳು ಯುವ ಜನತೆಗೆ ದಾರಿ ದೀಪವಾಗಿದೆ. ಅವರ ಕೃತಿಗಳನ್ನು ನಮ್ಮ ಯುವಕರು ಹೆಚ್ಚಾಗಿ ಓದಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

Tags:
error: Content is protected !!