Mysore
22
overcast clouds

Social Media

ಶನಿವಾರ, 13 ಜೂನ್ 2026
Light
Dark

ನಾನು ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಯ ಸ್ಪರ್ಧೆಯಲ್ಲಿ ಇಲ್ಲ: ಅಣ್ಣಾಮಲೈ ಸ್ಪಷ್ಟನೆ

ಚೆನ್ನೈ: ತಾವು ಈ ಬಾರಿ ತಮಿಳುನಾಡಿನ ವಿಧಾನಸಭಾ ಚುನಾವಣೆಯ ಸ್ಪರ್ಧೆಯಲ್ಲಿ ಇಲ್ಲ. ಇದರ ಬಗ್ಗೆ ಅನಗತ್ಯವಾಗಿ ಗೊಂದಲಗಳು ಬೇಡ ಎಂದು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಹೇಳಿದ್ದಾರೆ.

ಏಪ್ರಿಲ್.23ರ ಚುನಾವಣೆಗೆ ಪಕ್ಷದ ಹೈಕಮಾಂಡ್‍ಗೆ ಅನುಮೋದನೆಗಾಗಿ ಕಳುಹಿಸಲಾದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ಏಕೆಂದರೆ ಅವರು ಈ ಬಾರಿ ಪ್ರಚಾರ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಬಹುದೆಂದು ಅವರು ನಿರ್ಧರಿಸಿದ್ದರೆ, ಆದರೆ ಈಗ ಅವರ ಗಮನ ಬಿಜೆಪಿ ಮತ್ತು ಎನ್‍ಡಿಎ ಅಭ್ಯರ್ಥಿಗಳ ಪರ ಪ್ರಚಾರ ಮಾಡುವತ್ತಾಗಿತ್ತು ಎಂದು ಬಿಜೆಪಿಯ ಪಕ್ಷದ ನಾಯಕರು ಸ್ಷಷ್ಪಪಡಿಸಿದ್ದಾರೆ.

ನಾನು ಸ್ಪರ್ಧೆಯಲ್ಲಿ ಅಥವಾ ಪಟ್ಟಿಯಲ್ಲಿಲ್ಲ. ಈ ಚುನಾವಣೆಯಲ್ಲಿ, ನನ್ನ ಪಾತ್ರ ತಮಿಳುನಾಡಿನಾದ್ಯಂತ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದು. ಇದೀಗ, ಪಕ್ಷವು ಪುದುಚೇರಿ ಮತ್ತು ಕೇರಳದಲ್ಲಿ ಏಪ್ರಿಲ್ 7 ರವರೆಗೆ ಮತ್ತು ಅಂದಿನಿಂದ ಏಪ್ರಿಲ್ 23 ರವರೆಗೆ ತಮಿಳುನಾಡಿನಲ್ಲಿ ಪ್ರಚಾರ ಮಾಡುವ ಜವಾಬ್ದಾರಿಯನ್ನು ನನಗೆ ನೀಡಿದೆ. ಇದು ಪಕ್ಷ ನನಗೆ ನೀಡಿದ ಜವಾಬ್ದಾರಿ. ನಾನು ಆ ಜವಾಬ್ದಾರಿಯನ್ನು ಪೂರೈಸುತ್ತೇನೆ,” ಎಂದು ಕಣ್ಣೂರಿನಿಂದ ವಿಮಾನ ನಿಲ್ದಾಣಕ್ಕೆ ಬಂದ ನಂತರ ಸುದ್ದಿಗಾರರಿಗೆ ತಿಳಿಸಿದರು.

 

 

Tags:
error: Content is protected !!