Mysore
21
light rain

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ನಮ್ಮ ವೈರಿಗಳಿಗೆ ಮಾತ್ರ ಹೊರ್ಮುಜ್‌ ಮುಚ್ಚಿದೆ : ಇರಾನ್‌

ವಿಶ್ವಸಂಸ್ಥೆ : ಇರಾನ್‌ ವೈರಿಗಳು ಹಾಗೂ ಅವರೊಂದಿಗೆ ನಂಟು ಹೊಂದಿರುವ ರಾಷ್ಟ್ರಗಳಿಗೆ ಮಾತ್ರ ಹೊರ್ಮುಜ್‌ ಜಲಸಂಧಿ ಮುಚ್ಚಲಾಗಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಸಮುದ್ರಯಾನ ಸಂಘಟನೆಯ ಇರಾನ್‌ ಪ್ರತಿನಿಧಿ ಅಲಿ ಮೌಸವಿ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಸಮುದ್ರಯಾನ ಸಂಘಟನೆಯೊಂದಿಗೆ ಸಹಕರಿಸಲು ಇರಾನ್‌ ಬದ್ದವಾಗಿದೆ. ನಮ್ಮ ಶತ್ರು ಮತ್ತು ಅವರೊಂದಿಗೆ ಸಂಬಂಧ ಹೊಂದಿರುವ ರಾಷ್ಟ್ರಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಹಡಗು ಸಂಚಾರಕ್ಕೆ ಹೊರ್ಮುಜ್‌ ಜಲಸಂಧಿ ಸಂಚಾರಕ್ಕೆ ಮುಕ್ತವಾಗಿದೆ ಎಂದು ಅವರು ಹೇಳಿದ್ದಾರೆ.

ಇರಾನಿನ ಭಧ್ರತೆ ಮತ್ತು ಸುರಕ್ಷತೆ ಖಚಿತಪಡಿಸಿಕೊಳ್ಳುವ ಮೂಲಕ ಕಿರಿದಾದ ಜಲಮಾರ್ಗದ ಮೂಲಕ ಸಂಚಾರ ಸಾಧ್ಯ ಎಂದಿರುವ ಅವರು ಇಂದಿನ ಈ ಪರಿಸ್ಥಿತಿಗೆಲ್ಲ ಅಮೆರಿಕ ಹಾಗೂ ಇಸ್ರೇಲ್‌ ನಡೆಸಿರುವ ದಾಳಿಯೇ ಕಾರಣ ಎಂದು ಹೇಳಿದ್ದಾರೆ.

Tags:
error: Content is protected !!