ಚೆನ್ನೈ : ಶಿವಗಂಗಾ ಜಿಲ್ಲೆಯ ಕುಮ್ಮಂಗುಡಿ ಬಳಿ ಭಾನುವಾರ ಸಂಜೆ ಎರಡು ತಮಿಳುನಾಡು ಸರ್ಕಾರಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ 11 ಮಂದಿ ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ.
ತಿರುಪತ್ತೂರು ಪ್ರದೇಶದ ಪಿಳ್ಳೈಯಾರ್ಪಟ್ಟಿಯಿಂದ ಐದು ಕಿಲೋಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಒಂದು ಬಸ್ ತಿರುಪ್ಪೂರಿನಿಂದ ಕಾರೈಕುಡಿಗೆ ಪ್ರಯಾಣಿಸುತ್ತಿತ್ತು. ಇನ್ನೊಂದು ಬಸ್ ಕಾರೈಕುಡಿಯಿಂದ ದಿಂಡಿಗಲ್ ಜಿಲ್ಲೆಯ ಕಡೆಗೆ ಪ್ರಯಾಣಿಸುತ್ತಿತ್ತು.
ರಕ್ಷಣಾ ತಂಡಗಳು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಿದ್ದು, ಅಪಘಾತದ ಕಾರಣ ಮತ್ತು ಆಸ್ಪತ್ರೆಗೆ ದಾಖಲಾದವರ ಸ್ಥಿತಿಯ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಯುವಕ ; ಮನನೊಂದ 22 ವರ್ಷದ ಯವತಿ ಆತ್ಮಹತ್ಯೆ
ದಕ್ಷಿಣ ತಮಿಳುನಾಡಿನಲ್ಲಿ ಕೆಲ ದಿನಗಳ ಹಿಂದಷ್ಟೇ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿದ್ದವು. ಒಂದೇ ವಾರದಲ್ಲಿ 2ನೇ ಬಸ್ ಅಪಘಾತ ಪ್ರಕರಣ ವರದಿಯಾಗಿದೆ.
ತೆಂಕಾಸಿ ಜಿಲ್ಲೆಯಲ್ಲಿ ಎರಡು ಖಾಸಗಿ ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ್ದರು. ನಂತರ ತನಿಖಾಧಿಕಾರಿಗಳು ಒಂದು ಬಸ್‌ನ ಅಜಾಗರೂಕ ಚಾಲನೆಯೇ ಇದಕ್ಕೆ ಕಾರಣವೆಂದು ಗುರುತಿಸಿದ್ದರು.



