Mysore
17
broken clouds

Social Media

ಬುಧವಾರ, 15 ಜನವರಿ 2025
Light
Dark

ಹತ್ರಾಸ್ ಅತ್ಯಾಚಾರ | ಸಂತ್ರೆಸ್ತೆಯ ಕುಟುಂಬ ಭೇಟಿ ಮಾಡಿದ ರಾಹುಲ್‌

ಉತ್ತರ ಪ್ರದೇಶ: 2020ರ ಸೆಪ್ಟೆಂಬರ್‌ನಲ್ಲಿ ಸಾಮೂಹಿಕ ಅತ್ಯಾಚಾರದಿಂದ ಸಾವನ್ನಪ್ಪಿದ ದಲಿತ ಯುವತಿಯ ಕುಟುಂಬವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಗುರುವಾರ ಭೇಟಿ ಮಾಡಿದ್ದಾರೆ.

ಈ ಹಿನ್ನೆಲೆ ಹಾಥರಸ್‌ನ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಲಾಗಿತ್ತು.

ದೇಶದಲ್ಲಿ ನೊಂದ ಜನರೊಂದಿಗೆ ರಾಹುಲ್‌ ಮತ್ತು ಪ್ರಿಯಾಂಕಾ ಗಾಂಧಿ ಯಾವಾಗಲೂ ಜೊತೆಯಾಗಿದ್ದು ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ನೊಂದವರ ಪರವಾಗಿರುತ್ತಾರೆ. ಹತ್ರಾಸ್‌ ಸಂತ್ರಸ್ತೆಯ ಕುಟುಂಬದೊಂದಿಗೆ ಈಗಲೂ ಸಂಪರ್ಕದಲ್ಲಿದ್ದಾರೆ ಎಂದು ಸ್ಥಳೀಯ ಕಾಂಗ್ರೆಸ್‌ ನಾಯಕ ಚಂದ್ರಗುಪ್ತ ವಿಕ್ರಮಾದಿತ್ಯಾ ಹೇಳಿದರು.

2020 ಆಕೋಬರ್‌ 3ರಂದು ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಭೇಟಿ ಮಾಡಿದ್ದ ರಾಹುಲ್‌ ಹಾಗೂ ಪ್ರಿಯಾಂಕಾ, ಯುವತಿ ಸಾವಿಗೆ ನ್ಯಾಯ ಕೊಡಿಸಲು ಹೋರಾಡುವುದಾಗಿ ಭರವಸೆ ನೀಡಿದ್ದರು.

ಏನಿದು ಹತ್ರಾಸ್‌ ಘಟನೆ?
2020 ಸೆಪ್ಟೆಂಬರ್‌ 14 ರಂದು, ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆಯಲ್ಲಿ 19 ವರ್ಷದ ಯುವತಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಳು. ನಂತರ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೇ ಸೆಪ್ಟೆಂಬರ್‌ 29ರಂದು ಆಕೆ ಮೃತಪಟ್ಟಿದ್ದಳು. ಆಕೋಬರ್‌ 30ರಂದು ಬೆಳಿಗ್ಗೆ ಅಂತ್ಯಕ್ರಿಯೆ ನಡೆದತ್ತು.

ಪೊಲೀಸರು ಪ್ರಕರಣ ಮುಚ್ಚಿ ಹಾಕಲು ಬೇಗನೆ ಅಂತ್ಯಕ್ರಿಯೆ ನಡೆಸಿ ಎಂದು ಒತ್ತಾಯಿಸಿದ್ದರು ಎಂದು ಸಂತ್ರಸ್ತೆ ಕುಂಟುಂಬ ಆರೋಪಿಸಿದ್ದರು. ಆದರೆ ಈ ಆರೋಪ ಅಲ್ಲಗೆಳೆದಿದ್ದ ಪೊಲೀಸರು, ಕುಟುಂಬ ಹೇಳಿಕೆಯ ಪ್ರಕಾರವೇ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಹೇಳಿದ್ದರು.

ಈ ಘಟನೆ ಬಗ್ಗೆ ದೇಶದಾದ್ಯಂತ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.

Tags: