Mysore
24
mist

Social Media

ಗುರುವಾರ, 12 ಡಿಸೆಂಬರ್ 2024
Light
Dark

ಗುಜರಾತ್:‌ ನಾಳೆ ʼಒಂದೇ ಮೆಟ್ರೋʼಗೆ ಮೋದಿ ಚಾಲನೆ

ನವದೆಹಲಿ: ದೇಶದ ಪ್ರಥಮ ಆತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ʼವಂದೇ ಮೆಟ್ರೋʼ ರೈಲಿಗೆ ಗುಜರಾತ್‌ನ ಭುಜ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಳೆ ಅಹಮದಾಬಾದ್‌ನಿಂದ ವರ್ಚುವಲ್‌ ಆಗಿ ಚಾಲನೆ ನೀಡಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಸಚಿವಾಲಯ, ವಂದೇ ಮೆಟ್ರೊ ರೈಲು ಸುಮಾರು 359 ಕಿ.ಮೀ.ದೂರದ ಪ್ರಯಾಣವನ್ನು 5.45 ಗಂಟೆಗಳಲ್ಲಿ ತಲುಪಲಿದೆ. ಈ ರೈಲು ಭೂಜ್‌ನಿಂದ ಹೊರಟಯ ಅಹಮದಾಬಾದ್‌ ತಲುಪಲಿದೆ. ರೈಲಿನ ಟಿಕೆಟ್‌ ದರ 455 ಆಗಿದ್ದು, ರೈಲಿನಲ್ಲಿ ಸಂಚಾರಿಸಲು ಸಾರ್ವಜನಿಕರಿಗೆ ಸೆ.17ರಿಂದ ಅನುವು ಮಾಡಿಕೊಡಲಾಗುವುದು. ಇದು ಗರಿಷ್ಠ 100 ಮೀ.ವೇಗದಲ್ಲಿ ಚಲಿಸುವ ರೈಲಾಗಿದ್ದು, ಪ್ರಯಾಣಿಕರ ಖರ್ಚುನ್ನು ತಗ್ಗಿಸಿ, ವೇಗದ ಪ್ರಯಾಣವನ್ನು ಖಚಿತಪಡಿಸುತ್ತದೆ ಹೇಳಿದೆ.

ಈ ರೈಲಿನಲ್ಲಿ ಅತ್ಯುತ್ತಮ ದರ್ಜೆಯ ಸೀಟುಗಳು, ಹವಾನಿಯಂತ್ರಿತ ಕ್ಯಾಬಿನ್‌, ಮಾಡ್ಯುಲರ್‌ ಇಂಟೀರಿಯರ್ಸ್‌ ಹೊಂದಿದ್ದು, ಇತರೆ ಮೆಟ್ರೋ ರೈಲುಗಳಿಗಿಂತ ಉನ್ನತ ದರ್ಜೆಯ ರೈಲಾಗಿದೆ. ಅಲ್ಲದೆ, ಅಪಘಾತದ ಸಂದರ್ಭದಲ್ಲಿ ತಡೆ ತಂತ್ರಜ್ಞಾನ ಕವಚ, ಬೆಂಕಿ ಅವಘಡ ಪತ್ತೆ ತಂತ್ರಜ್ಞಾನ, ತುರ್ತು ಲೈಟ್‌ಗಳು, ಏರೋಸಾಲ್‌ ಆಧಾರಿತ ಬೆಂಕಿ ನಂದಿಸುವ ವ್ಯವಸ್ಥೆಯಂತಹ ಆತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನವನ್ನು ಒಳಗೊಂಡಿದೆ.

ವಂದೇ ಮೇಟ್ರೋ ರೈಲಿಗಿಂತ ಇತರೆ ಮೆಟ್ರೊ ರೈಲುಗಳು ಕಡಿಮೆ ಅಂತರದಲ್ಲಿ ಸಂಚರಿಸುತ್ತವೆ. ಮೆಟ್ರೋ ಎಂಬ ಪದ ನಗರದ ಭೂದೃಶ್ಯದ ಪರಿಕಲ್ಪನೆ ನೀಡಿದ್ದು, ಅದರಂತೆಯೇ ಈ ರೈಲು ನಗರದ ಹೃದ
ಯಭಾಗದಿಂದ ಬಾಹ್ಯ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.

Tags: