ಉತ್ತರ ಪ್ರದೇಶ: ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್ ವೀಕ್ಷಣೆಗೆ ಜನವರಿ.15ರಿಂದ ಮೂರು ದಿನಗಳ ಕಾಲ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಪ್ರವಾಸಿಗರು ಜನವರಿ.15, 16 ಹಾಗೂ 17ರಂದು ಕೆಲವು ಸಮಯಗಳಲ್ಲಿ ಟಿಕೆಟ್ ತಾಜ್‌ಮಹಲ್‌ಗೆ ಭೇಟಿ ನೀಡುವ ಅವಕಾಶವನ್ನು ಹೊಂದಿರುತ್ತಾರೆ.
ಈ ಪರಿಣಾಮಕ್ಕಾಗಿ ಎಎಸ್‌ಐ ಅಧಿಕೃತ ಆದೇಶವನ್ನು ಹೊರಡಿಸಿದೆ. ಎಎಸ್‌ಐ ಹೊರಡಿಸಿದ ಆದೇಶಗಳ ಪ್ರಕಾರ, ಜನವರಿ.15, 26 ಹಾಗೂ 17ರಂದು ತಾಜ್‌ಮಹಲ್ ನೋಡಲು ಉಚಿತ ಪ್ರವೇಶವಿದೆ. ಇದಕ್ಕಾಗಿ ಎಎಸ್‌ಐ ಸಮಯವನ್ನು ನಿಗದಿಪಡಿಸಿದೆ.
ಜನವರಿ.15ರಂದು ಗುರುವಾರ ಮಧ್ಯಾಹ್ನ 2ರಿಂದ ಸೂರ್ಯಾಸ್ತದವರೆಗೆ ಪ್ರವೇಶ ಉಚಿತವಾಗಿರುತ್ತದೆ. ಜನವರಿ.16ರಂದು ಶುಕ್ರವಾರ ಮಧ್ಯಾಹ್ನ 2ರಿಂದ ಸೂರ್ಯಾಸ್ತದವರೆಗೆ ಸಂದರ್ಶಕರು ತಾಜ್‌ಮಹಲ್ ವೀಕ್ಷಣೆ ಮಾಡಬಹುದಾಗಿದೆ. ಜನವರಿ.17ರಂದು ಶನಿವಾರದಂದು ಇಡೀ ದಿನ ಪ್ರವೇಶ ಉಚಿತವಾಗಿರುತ್ತದೆ ಎಂದು ಘೋಷಣೆ ಮಾಡಲಾಗಿದೆ.





