Mysore
17
few clouds

Social Media

ಶನಿವಾರ, 24 ಜನವರಿ 2026
Light
Dark

ವಂಚನೆ ಆರೋಪ : ಬಾಲಿವುಡ್‌ ನಟಿ ಶಿಲ್ಪಾಶೆಟ್ಟಿ ಕಂಪನಿಯ ನಾಲ್ವರಿಗೆ ಸಮನ್ಸ್‌

ಮುಂಬೈ : ಅರವತ್ತು ಕೋಟಿ ರೂ.ಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಒಡೆತನದ ಬೆಸ್ಟ್ ಡೀಲ್ ಪ್ರೆ ವೇಟ್ ಲಿಮಿಟೆಡ್ ಕಂಪೆನಿಯ ನಾಲ್ವರು ಉದ್ಯೋಗಿಗಳಿಗೆ ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯು) ಸಮನ್ಸ್ ಜಾರಿ ಮಾಡಿದೆ.

ಇದನ್ನೂ ಓದಿ:-ಬಿಹಾರ ಚುನಾವಣೆ : ಮೊದಲ ಹಂತದಲ್ಲಿ ಶೇ.60ರಷ್ಟು ಮತದಾನ

ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಉದ್ಯಮಿ ದೀಪಕ್ ಕೊಠಾರಿ ಅವರಿಗೆ ಸುಮಾರು 60 ಕೋಟಿ ರೂ.ಗಳನ್ನು ವಂಚಿಸಿದ ಆರೋಪದ ಮೇಲೆ ದಂಪತಿ ಪೊಲೀಸ್ ಪ್ರಕರಣ ಎದುರಿಸುತ್ತಿದ್ದಾರೆ. ನಾಲ್ವರು ಉದ್ಯೋಗಿಗಳಲ್ಲಿ ಒಬ್ಬರು ಕಳೆದ ವಾರ ಇಒಡಬ್ಲ್ಯೂನಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ಮತ್ತು ಅಗತ್ಯವಿದ್ದರೆ ಅವರನ್ನು ಮತ್ತೆ ಪ್ರಶ್ನಿಸಬಹುದು. ಇತರ ಮೂವರು ಉದ್ಯೋಗಿಗಳ ಹೇಳಿಕೆಗಳನ್ನು ಮುಂದಿನ ದಿನಗಳಲ್ಲಿ ದಾಖಲಿಸಲಾಗುವುದು ಎಂದು ತಿಳಿದುಬಂದಿದೆ.

ಆ ಸಮಯದಲ್ಲಿ ಈ ಉದ್ಯೋಗಿಗಳು ರಾಜ್ ಕುಂದ್ರಾ ಅವರ ಕಂಪೆನಿಯಲ್ಲಿ ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದರು ಎಂದು ಹಿರಿಯ ಇಒಡಬ್ಲ್ಯೂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:
error: Content is protected !!