ನವದೆಹಲಿ: ನವೆಂಬರ್.25ರಂದು ಅಯೋಧ್ಯೆಯ ಮುಖ್ಯ ದೇವಾಲಯದ ಮೇಲೆ ಧ್ವಜಾರೋಹಣ ಮಾಡಲು ಶ್ರೀರಾಮ ಜನಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಔಪಚಾರಿಕವಾಗಿ ಆಹ್ವಾನಿಸಿದೆ. ಈ ಸಮಾರಂಭವು ರಾಮ ಮಂದಿರದ ಸಾಂಕೇತಿಕ ಪೂರ್ಣಗೊಳಿಸುವಿಕೆಯನ್ನು ಸಂಕೇತಿಸುತ್ತಿದೆ.
ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಧಾನ ಮಂತ್ರಿ ಮೋದಿಯವರು ನವೆಂಬರ್.25ರಂದು ಅಯೋಧ್ಯೆಗೆ ಆಗಮಿಸಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಭಾರತ ಮತ್ತು ಪ್ರಪಂಚದಾದ್ಯಂತದ ಭಕ್ತರಿಗೆ ರಾಮ ಮಂದಿರ ಸಂಕೀರ್ಣ ಪೂರ್ಣಗೊಂಡಿರುವುದನ್ನು ಸೂಚಿಸಲು ಪ್ರಧಾನಿ ಮೋದಿ ಹಿಂದೂ ಸಂಪ್ರದಾಯದಲ್ಲಿ ಪವಿತ್ರ ಸಂಕೇತವಾದ ದೇವಾಲಯದ ಧ್ವಜಾರೋಹಣ ಮಾಡಲಿದ್ದಾರೆ. ಇದು ರಾಮಮಂದಿರ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ ಎಂಬುದನ್ನು ಸೂಚಿಸುತ್ತದೆ.
2022ರಲ್ಲಿ ರಾಮಮಂದಿರದ ನೆಲ ಮಹಡಿ ಪೂರ್ಣಗೊಂಡಿತ್ತು. ಈಗಾಗಲೇ ಗರ್ಭಗುಡಿಯಲ್ಲಿ ರಾಮ ಪರಿವಾರದ ದೇವತೆಗಳನ್ನು ಸ್ಥಾಪಿಸಲಾಗಿದೆ. ಎರಡನೇ ಮಹಡಿಯನ್ನು ಬಹು ಭಾಷೆಗಳಲ್ಲಿ ರಾಮಾಯಣ ಗ್ರಂಥಗಳನ್ನು ಸಂರಕ್ಷಿಸಲು ಆಧ್ಯಾತಿಕ ಆರ್ಕೈವ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ.
ಈ ದೊಡ್ಡ ಸಂಕೀರ್ಣದೊಳಗೆ 14 ಸಣ್ಣ ದೇವಾಲಯಗಳಿವೆ. ಅವೆಲ್ಲವೂ ಪೂರ್ಣಗೊಂಡಿವೆ. ಅವು ಶೀಘ್ರದಲ್ಲೇ ಸಾರ್ವಜನಿಕರಿಗೆ ಮುಕ್ತವಾಗುತ್ತವೆ.





