Mysore
26
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ಭಾರತದಲ್ಲಿ ಮೊದಲ ಟೆಸ್ಲಾ ಕಾರು ಮಾರಾಟ : ಸಚಿವರೊಬ್ಬರು ಖರೀದಿ

Tesla

ಮುಂಬೈ : ಭಾರತದಲ್ಲಿ ಮೊದಲ ಟೆಸ್ಲಾ ಕಾರು ಮಾರಾಟವಾಗಿದೆ. ‘ಮಾಡೆಲ್‌ Y’ ಟೆಸ್ಲಾ ಕಾರನ್ನು ಮಹಾರಾಷ್ಟ್ರದ ಸಚಿವರೊಬ್ಬರು ಖರೀದಿಸಿದ್ದಾರೆ.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ‘ಟೆಸ್ಲಾ ಎಕ್ಸ್‌ಪೀರಿಯೆನ್ಸ್ ಸೆಂಟರ್’ನಿಂದ ಕಾರು ಮಾರಾಟವಾಗಿದೆ. ಮೊದಲ ಟೆಸ್ಲಾ (ಮಾದರಿ Y) ಕಾರನ್ನು ಮಹಾರಾಷ್ಟ್ರ ರಾಜ್ಯದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರಿಗೆ ಹಸ್ತಾಂತರಿಸಲಾಗಿದೆ.

ಭಾರತದಲ್ಲಿ ಮೊದಲನೆಯದಾದ ‘ಟೆಸ್ಲಾ ಎಕ್ಸ್‌ಪೀರಿಯೆನ್ಸ್ ಸೆಂಟರ್’ ಅನ್ನು ಜುಲೈ 15 ರಂದು ಉದ್ಘಾಟಿಸಲಾಗಿತ್ತು. ‘ಭಾರತದ ಮೊದಲ ಟೆಸ್ಲಾ ಕಾರು ಮಾಡೆಲ್ ವೈ ಖರೀದಿಸಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಮಹಾರಾಷ್ಟ್ರ ಸಾರಿಗೆ ಸಚಿವ ಮತ್ತು ಭಾರತದ ಮೊದಲ ಟೆಸ್ಲಾ ಕಾರಿನ ಮಾಲೀಕ ಪ್ರತಾಪ್ ಸರ್ನಾಯಕ್ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸಾರಿಗೆ ಸಚಿವನಾಗಿ, ನಾನು ಇದನ್ನು ಖರೀದಿಸಿದ್ದೇನೆ. ಮಹಾರಾಷ್ಟ್ರ ಸರ್ಕಾರ ಯಾವಾಗಲೂ ಪರಿಸರ ಸ್ನೇಹಿ ಕಾರುಗಳನ್ನು ರಸ್ತೆಗಳಿಗೆ ತರಲು ಪ್ರಯತ್ನಿಸುತ್ತದೆ. ಪರಿಸರ ಸ್ನೇಹಿ ವಾಹನಗಳನ್ನು ಸಾಧ್ಯವಾದಷ್ಟು ಬಳಸಲು ನಾನು ಸಾರ್ವಜನಿಕ ಜಾಗೃತಿ ಮೂಡಿಸುತ್ತೇನೆ. ಮುಂದಿನ 10 ವರ್ಷಗಳಲ್ಲಿ ರಸ್ತೆಗಳಲ್ಲಿ ಗರಿಷ್ಠ ಸಂಖ್ಯೆಯ ವಿದ್ಯುತ್ ವಾಹನಗಳನ್ನು ಹೊಂದಲು ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ವಿದ್ಯುತ್ ವಾಹನ ತಯಾರಿಕಾ ಕಂಪನಿಗಳಿಗೆ ಎಲ್ಲಾ ಅನುಕೂಲಗಳನ್ನು ಒದಗಿಸಲು ಸಾರಿಗೆ ಇಲಾಖೆ ಪ್ರಯತ್ನಿಸುತ್ತಿದೆ. ಅಂತಹ ವಾಹನಗಳ ಮಾಲೀಕರಿಗೂ ನಾವು ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಹೇಳಿದ್ದಾರೆ.

Tags:
error: Content is protected !!