ಪಾಟ್ನಾ: 2025ರ ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯಲಿದೆ.
ನಾಳೆ 18 ಜಿಲ್ಲೆಗಳ 121 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಉಳಿದ 122 ಸ್ಥಾನಗಳಿಗೆ ನವೆಂಬರ್.11ರಂದು ಮತದಾನ ನಡೆಯಲಿದೆ.
ಇದನ್ನು ಓದಿ: ಬಿಹಾರ ಚುನಾವಣೆಗಾಗಿಯೇ ಅಧಿಕಾರಿಗಳಿಂದ ಹಣ ವಸೂಲಿ: ಸಂಸದ ಬಿ.ವೈ.ರಾಘವೇಂದ್ರ ಗಂಭೀರ ಆರೋಪ
243 ಕ್ಷೇತ್ರಗಳಲ್ಲಿ 203 ಸಾಮಾನ್ಯ ಸ್ಥಾನಗಳಾಗಿದ್ದು, 38 ಎಸ್‌ಸಿ ಹಾಗೂ 2 ಎಸ್‌ಟಿಗಳಿಗೆ ಮೀಸಲು ಕ್ಷೇತ್ರಗಳಿವೆ. ಮೊದಲ ಹಂತದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ಪಕ್ಷಗಳ 1314 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.
ಚುನಾವಣೆಯಲ್ಲಿ ಎನ್‌ಡಿಎ ಕೂಟ ಹಾಗೂ ಇಂಡಿಯಾದ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ನವೆಂಬರ್.14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.





