ಅಬುಜ: ವಾಯುವ್ಯ ನೈಜೀರಿಯಾದ ಯರ್ಗೋಜಿ ಗ್ರಾಮದ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಕನಿಷ್ಠ 50 ಮಂದಿ ಮೃತ್ಯುವಾಗಿದ್ದು, ಹಲವಾರು ಜನರನ್ನು ಹೊತ್ತೊಯ್ಯಲಾಗಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ ಎಂದು ವರದಿಯಾಗಿದೆ.
ಕಟ್ಸಿನಾ ರಾಜ್ಯದ ಕಂಕಾರಾ ಪ್ರಾಂತ್ಯದಲ್ಲಿರುವ ಯರ್ಗೋಜಿ ನಗರಕ್ಕೆ 12ಕ್ಕೂ ಹೆಚ್ಚಿನ ಬಂದೂಕುಧಾರಿಗಳು ಏಕಾಏಕಿ ದಾಳಿ ಮಾಡಿದ್ದಾರೆ. ಬಂದೂಕು ದಾಳಿಯಿಂದ ಹಲವಾರು ಜನರು ಮೃತರಾಗಿದ್ದು, ಕನಿಷ್ಠ 50 ಮೃತರಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗೂ ಉಳಿದ ಕೆಲವರನ್ನು ಅಪಹರಿಸಿರುವುದಾಗಿ ವರದಿಯಾಗಿದೆ.