Mysore
28
light rain

Social Media

ಮಂಗಳವಾರ, 04 ಆಗಸ್ಟ್ 2026
Light
Dark

ಸಿಎಂ ಬದಲಾವಣೆ ಸಮಯ ಬಂದಿದೆ: ವಿಜಯೇಂದ್ರ

by vijayendra

ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾಗುವ ಸಮಯ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರ್ಚಿಗಾಗಿ ದಿನವೂ ಕಿತ್ತಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಗ್ಯಾಂಗ್‌ ಮೊದಲು ನವದೆಹಲಿಗೆ ಹೋದರೆ, ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಗ್ಯಾಂಗ್‌ ದೆಹಲಿಗೆ ಃೋಗುತ್ತಿದೆ. ಇವರಿಬ್ಬರ ಜಗಳದಲ್ಲಿ ನನಗೇನಾದರೂ ಲಾಭ ಆಗುತ್ತದೆಯೇ ಎಂದು ಮಲ್ಲಿಕಾರ್ಜುನ ಖರ್ಗೆ ಕೂಟ ಟವೆಲ್‌ ಹಾಕಿದ್ದಾರೆ ಎಂದು ಟೀಕೆ ಮಾಡಿದರು.

ಇನ್ನೂ ರಾಜ್ಯದಲ್ಲಿರುವುದು ಮಾನವೀಯತೆ ಇಲ್ಲದ ಭ್ರಷ್ಟ ಸರ್ಕಾರ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಸೋಲುತ್ತದೆ ಎಂದು ಆ ಪಕ್ಷದ ಮುಖಂಡರೇ ಹೇಳುತ್ತಿದ್ದಾರೆ. ಇದು ಆ ಪಕ್ಷದ ಸ್ಥಿತಿ ಎಂದು ಆರೋಪಿಸಿದರು.

Tags:
error: Content is protected !!