Mysore
25
overcast clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ಬ್ಯಾಂಕಾಕ್‌ ಭೂಕಂಪ ; ಕೋಲ್ಕತ್ತ, ಇಂಫಾಲ್‌ನಲ್ಲೂ ಕಂಪಿಸಿದ ಭೂಮಿ

ಬ್ಯಾಂಕಾಕ್‌ : ಮ್ಯಾನ್ಮಾರ್‌ ಮತ್ತು ಥೈಯ್ಲಾಂಡ್‌ ದೇಶಗಳಲ್ಲಿ ಭೂಕಂಪ ಸಂಭವಿಸಿದೆ. ಭಾರಿ ಪ್ರಮಾಣದ ಭೂಕಂಪ ಇದಾಗಿದ್ದು, ರಿಕ್ಟರ್‌ ಮಾಪನದಲ್ಲಿ 7.7ರಷ್ಟು ತೀವ್ರತೆ ದಾಖಲಾಗಿದೆ. ಗಗನಚುಂಬಿ ಕಟ್ಟಡಗಳು ನೆಲಕಚ್ಚಿದ್ದು, ಸಾವು ನೋವುಗಳು ವರದಿಯಾಗಿದೆ. ಈ ಘಟನೆ ಬೆನ್ನಲ್ಲೇ ಭಾರತದ ಕೋಲ್ಕತ್ತ ಮತ್ತು ಇಂಫಾನ್‌ನಲ್ಲೂ ಕಂಪನದ ಅನುಭವವಾಗಿದೆ.

ಈ ಕುರಿತು ಕೋಲ್ಕತ್ತಾದ ಜನ ಭೂಕಂಪನ ಅನುಭವವನ್ನು ಹೇಳಿಕೊಂಡಿದ್ದಾರೆ.

ಭೂಕಂಪನದ ತೀವ್ರತೆಗೆ ಗಗನಚುಂಬಿ ಕಟ್ಟಡಗಳು ಧರೆಗುರುಳಿದವು. ಈ ವೇಳೆ ಭಾರಿ ಪ್ರಮಾಣದ ಧೂಳೂ ಇಡೀ ನಗರವನ್ನೇ ಆವರಿಸಿತು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ದೃಶ್ಯದಲ್ಲಿ ಜನರ ಚೀರಾಟಗಳು ಹೃದಯ ಕಲಕುವಂತಿದೆ.

ಪ್ರಾಥಮಿಕ ವರದಿ ಪ್ರಕಾರ, ಮ್ಯಾನ್ಮಾರ್‌ನ ಮಂಡಲೆ ನಗರದ ಬಳಿ10ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಜರ್ಮನಿಯ ಜೆಎಫ್‌ಝಡ್‌ ಭೂವಿಜ್ಞಾನ ಕೇಂದ್ರ ಹೇಳಿದೆ.

ಭೂಕಂಪನದ ಅನುಭವ ಭಾರತದ ಕೋಲ್ಕತ್ತ ಮತ್ತು ಇಂಫಾನ್‌ನಲ್ಲೂ ಜೊತೆಗೆ ಮೇಘಾಲಯದ ಪೂರ್ವ ಗರೊ ಪರ್ವತ ಶ್ರೇಣಿಯಲ್ಲಿ ಕಂಪನದ ಅನುಭವವಾಗಿದೆ. ಈ ವೇಳೆ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಯಾವುದೇ ಹಾನಿಯ ಕುರಿತು ವರದಿಯಾಗಿಲ್ಲ.

ಘಟನೆ ಕುರಿತು ಪ್ರಧಾನಿ ಮೋದಿ ಆಘಾತ ವ್ಯಕ್ತಪಡಿಸಿದ್ದು, ಮ್ಯಾನ್ಮಾರ್‌ ಮತ್ತು ಥಾಯ್ಲೆಂಡ್‌ ನೆರವಿಗೆ ಸಿದ್ಧ ಎಂದು ಅಭಯ ನೀಡಿದ್ದಾರೆ.

Tags: