Mysore
23
scattered clouds

Social Media

ಭಾನುವಾರ, 01 ಮಾರ್ಚ್ 2026
Light
Dark

ಅಮೇರಿಕಾದಲ್ಲಿ ಬಿರುಗಾಳಿ ಅಬ್ಬರ: 35 ಮಂದಿ ಬಲಿ

ವಾಷಿಂಗ್ಟನ್:‌ ಅಮೇರಿಕಾದ ಸೇಂಟ್‌ ಲೂಯಿಸ್‌, ಮಿಸೌರಿ, ಕೆಂಟುಕಿ ಮತ್ತು ವರ್ಜೀನಿಯಾದಲ್ಲಿ ಭಾರೀ ಪ್ರಮಾಣದ ಬಿರುಗಾಳಿ ಅಬ್ಬರಕ್ಕೆ 35 ಮಂದಿ ಬಲಿಯಾಗಿದ್ದು, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಭಾರೀ ಬಿರುಗಾಳಿಯಿಂದ ಸುಮಾರು 5000ಕ್ಕೂ ಹೆಚ್ಚು ಕಟ್ಟಡಗಳು ನೆಲಸಮವಾಗಿದ್ದು, ಇಲ್ಲಿಯವರೆಗೆ 35 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಹಲವಾರು ಕಟ್ಟಡಗಳಿಗೂ ಹಾನಿಯಾಗಿದೆ.

ಬಿರುಗಾಳಿ ಅಬ್ಬರಕ್ಕೆ ಗ್ರೇಟ್‌ ಲೇಕ್ಸ್‌ನ ಲಕ್ಷಾಂತರ ಮನೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಿಡ್‌ವೆಸ್ಟ್‌ ಹಾಗೂ ಮಧ್ಯ ಅಂಟ್ಲಾಟಿಕ್‌ನಲ್ಲಿ ಸಂಭವಿಸಿದ ಚಂಡಮಾರುತದ ಪರಿಣಾಮ ಈ ಬಿರುಗಾಳಿ ಬೀಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!