Mysore
19
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ವರದಕ್ಷಿಣೆ ಕಿರುಕುಳ ವದಂತಿ ಗಾಳಿಗಿಂತಲೂ ಹೆಚ್ಚು ವೇಗ : ಸುಪ್ರೀಂ ಅಸಮಧಾನ

ಹೊಸದಿಲ್ಲಿ : ಇತ್ತೀಚಿನ ವರ್ಷಗಳಲ್ಲಿ ಅತ್ತೆಮಾವ, ಸೊಸೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂಬ ಸುದ್ದಿ ಗಾಳಿಗಿಂತಲೂ ಶರವೇಗದಲ್ಲಿ ಹಬ್ಬುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸೊಸೆಯನ್ನು ಕ್ರೌರ್ಯಕ್ಕೆ ಗುರಿಪಡಿಸಲಾಗಿದೆ ಎಂಬ ಆರೋಪ ಪ್ರಕರಣವನ್ನು ಖುಲಾಸೆಗೊಳಿಸಿದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ. ಪ್ರಕರಣ ಸಂಬಂಧ ಸ್ಥಳೀಯ ನ್ಯಾಯಾಲಯವು ಮಹಿಳೆಗೆ ಮೂರು ವರ್ಷ ಜೈಲು ಶಿಕ್ಷೆಯ ತೀರ್ಪನ್ನು ಎತ್ತಿ ಹಿಡಿದಿದ್ದ ಉತ್ತರಖಂಡ್‌ನ ಆದೇಶವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿತ್ತು.

ನ್ಯಾಯಮೂರ್ತಿಗಳಾದ ಅರವಿಂದ್‌ಕುಮಾರ್ ಮತ್ತು ಎನ್.ವಿ.ಅಂಜಾರಿಯ ನೇತೃತ್ವದ ವಿಭಾಗೀಯ ಪೀಠ ಸೊಸೆಗೆ ಅತ್ತೆ ಮತ್ತು ಮಾವ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂಬ ಸುದ್ದಿ ಗಾಳಿಗಿಂತಲೂ ವೇಗವಾಗಿ ಹಬ್ಬುತ್ತದೆ ಎಂದು ಹೇಳಿದೆ.

ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಮೃತಪಟ್ಟ ಸೊಸೆಯು ತಾನು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ತನ್ನ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ ಎಂಬ ಕಾರಣಕ್ಕಾಗಿ ಹಿಂದಿನ ಐಪಿಎಸ್ ಸೆಕ್ಷನ್ ೪೯೮ರಡಿ ಶಿಕ್ಷೆ ವಿಧಿಸಲಾಗಿತ್ತು.

ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಸೊಸೆಗೆ ಅತ್ತೆಮಾವ ಎಂದಿಗೂ ಕಿರುಕುಳ ನೀಡಿರಲಿಲ್ಲ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದನ್ನು ಸರ್ವೋಚ್ಚ ನ್ಯಾಯಾಲಯ ಗಮನಿಸಿತು. ಮೃತಳ ತಾಯಿಯ ಹೇಳಿಕೆಯನ್ನು ಉಲ್ಲೇಖಿಸಿದ ಪೀಠ, ವರದಕ್ಷಿಣೆಗಾಗಿ ಕಿರುಕುಳ ಅಥವಾ ಮೇಲ್ಮನವಿದಾರರು ಮಾಡಿದ ವರದಕ್ಷಿಣೆ ಬೇಡಿಕೆಯಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡರು ಎಂಬ ತೀರ್ಮಾನಕ್ಕೆ ಬರುವುದು ಯಾವುದೇ ಸಾಮಾನ್ಯ ವಿವೇಕಯುತ ವ್ಯಕ್ತಿಗೆ ಯಾವುದೇ ವಿಶ್ವಾಸವನ್ನು ಪ್ರೇರೇಪಿಸುವುದಿಲ್ಲ ಎಂದು ಹೇಳಿದೆ.

ಮೇಲ್ಮನವಿಯನ್ನು ಅನುಮತಿಸುವಾಗ, ಪೀಠವು ಉಚ್ಚ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಮಹಿಳೆಯನ್ನು ಖುಲಾಸೆಗೊಳಿಸಿತು.

Tags:
error: Content is protected !!