Mysore
16
scattered clouds

Social Media

ಬುಧವಾರ, 21 ಜನವರಿ 2026
Light
Dark

ಧರ್ಮಸ್ಥಳ ಪ್ರಕರಣ : ಕೇರಳದ ಸಂತೋಷ್‌ಕುಮಾರ್ ಹೆಸರು ತಳುಕು

ತಿರುವನಂತಪುರಂ : ಇಡೀ ರಾಷ್ಟ್ರದ ಗಮನ ಸೆಳೆದಿರುವ ಧರ್ಮಸ್ಥಳ ಪ್ರಕರಣ ಸಂಬಂಧ ಕೇರಳದ ಕಮ್ಯುನಿಸ್ಟ್(ಸಿಪಿಐ) ಪಕ್ಷದ ಸಂಸದರೊಬ್ಬರ ಹೆಸರು ತಳುಕು ಹಾಕಿಕೊಂಡಿದೆ. ಕಮ್ಯುನಿಸ್ಟ್ ಪಕ್ಷದ ರಾಜ್ಯಸಭಾ ಸದಸ್ಯ ಸಂತೋಷ್‌ಕುಮಾರ್ ಅವರೇ ತಲೆಬುರುಡೆಯನ್ನು ಪ್ರಕರಣದ ಪ್ರಮುಖ ಆರೋಪಿ ಪ್ರಸ್ತುತ ಎಸ್‌ಐಟಿ ವಶದಲ್ಲಿರುವ ಚಿನ್ನಯ್ಯ ಅವರಿಗೆ ತಂದುಕೊಟ್ಟಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಚಿನ್ನಯ್ಯ, ಗಿರೀಶ್ ಮಟ್ಟಣ್ಣವರ್, ಟಿ.ಜಯಂತ್ ಅವರು ತಿರುವಂತನಪುರಕ್ಕೆ ತೆರಳಿ ರಾಜ್ಯಸಭಾ ಸದಸ್ಯರೂ ಆಗಿರುವ ಸಂತೋಷ್‌ಕುಮಾರ್ ಅವರನ್ನು ಭೇಟಿಯಾಗಿ ತಲೆಬುರುಡೆ ಪ್ರಕರಣದ ಬಗ್ಗೆ ಯಾವ ಯಾವ ತಂತ್ರಗಳನ್ನು ರೂಪಿಸಬೇಕು ಎಂಬುದರ ಬಗ್ಗೆ ರಹಸ್ಯ ಸ್ಥಳವೊಂದರಲ್ಲಿ ಚರ್ಚೆ ನಡೆಸಿದ್ದರು.

ಎಸ್‌ಐಟಿ ವಶದಲ್ಲಿರುವ ಚಿನ್ನಯ್ಯ ಹಾಗೂ ವಿಚಾರಣೆಗೆ ಹಾಜರಾಗಿದ್ದ ಗಿರೀಶ್ ಮಟ್ಟಣ್ಣವರ್, ಜಯಂತ್, ಮಹೇಶ್ ಶೆಟ್ಟಿ ತಿಮರೋಡಿ ಅವರ ವಿಚಾರಣೆ ವೇಳೆ ಈ ಪ್ರಕರಣದ ಮಾಸ್ಟರ್ ಮೈಂಡ್ ಸಂತೋಷ್‌ಕುಮಾರ್ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಹೊಸದಿಲ್ಲಿಗೂ ತೆರಳಿದ್ದ ಈ ತಂಡವು ಸಂಸದರನ್ನು ಭೇಟಿಯಾಗಿ ಧರ್ಮಸ್ಥಳದಲ್ಲಿ ಕಳೆದ ಹಲವಾರು ವರ್ಷದಿಂದ ಶವಗಳನ್ನು ಹೂತು ಹಾಕಿದ್ದೇನೆ. ಈಗ ನನಗೆ ಇದರ ಪಾಪಪ್ರಜ್ಞೆ ಕಾಡುತ್ತಿದೆ. ಪೊಲೀಸರು ತನಿಖೆ ನಡೆಸಿದರೆ ಎಲ್ಲವನ್ನೂ ಬಾಯಿ ಬಿಡುವುದಾಗಿ ಹೇಳುವಂತೆ ಚಿನ್ನಯ್ಯನ ತಲೆಗೆ ತುಂಬಿದ್ದು ಈ ತಂಡ ಎನ್ನಲಾಗಿದೆ.

ನಾನು ತಂಡ ಹೇಳಿದಂತೆ ಕೇಳಿದ್ದೆ. ಇದರಲ್ಲಿ ನನ್ನ ಪಾತ್ರವೇನಿಲ್ಲ ಎಂದು ಕಟಕಟೆಯಲ್ಲಿ ಕಣ್ಣೀರು ಹಾಕಿದ್ದ ಚಿನ್ನಯ್ಯ ತನಗೆ ಯಾವ ರೀತಿ ಆಮಿಷವೊಡ್ಡಿದರು, ತಲೆಬುರಡೆಯನ್ನು ತಂದಿದ್ದು ಎಲ್ಲಿಂದ? ದಿಲ್ಲಿಯಲ್ಲಿ ಭೇಟಿಯಾಗಿದ್ದು ಯಾರನ್ನು? ತಿರುವಂತನಪುರದಲ್ಲಿ ಭೇಟಿಯಾಗಿದ್ದು ಸೇರಿದಂತೆ ಹಲವು ವಿಷಯಗಳನ್ನು ಬಾಯಿಬಿಟ್ಟಿದ್ದಾನೆ.

ಇದೀಗ ಎಸ್‌ಐಟಿ ಅಽಕಾರಿಗಳು ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಆರೋಪಿಸಿರುವ ರಾಜ್ಯಸಭಾ ಸದಸ್ಯನಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.

Tags:
error: Content is protected !!