Mysore
20
overcast clouds
Light
Dark

ಧರ್ಮಾಧಾರಿತ ಜನಸಂಖ್ಯಾ ವರದಿ ಬಿಡುಗಡೆ: ಮುಸ್ಲಿಂ ಸಂಖ್ಯೆ ಹೆಚ್ಚಳ

ನವದೆಹಲಿ: ಪ್ರಧಾನಮಂತ್ರಿ ಆರ್ಥಿಕ ಸಲಾಹ ಮಂಡಳಿ ಧರ್ಮಧಾರಿತ ಜನಸಂಖ್ಯಾ ವರದಿಯನ್ನು ಇಂದು(ಮೇ 9) ಬಿಡುಗಡೆ ಮಾಡಿದೆ.

1950ರಿಂದ 2015ರ ವರೆಗಿನ ಮುಸ್ಲಿಂರ ಜನಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ದೇಶದಲ್ಲಿ ಮುಸ್ಲಿಂ ಜನಸಂಖ್ಯಾ ಪಾಲು ಶೇ. 43.15 ರಷ್ಟು ಹೆಚ್ಚಾಗಿದೆ. ಜೊತೆಗೆ ಕ್ರಿಶ್ಚಿಯನ್‌, ಬೌದ್ಧ ಹಾಗೂ ಸಿಖ್‌ರ ಜನಸಂಖ್ಯೆಯು ಏರಿಕೆ ಕಂಡಿದೆ.

1950 ರಲ್ಲಿ ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಪ್ರಮಾಣ 84% ಏರಿಕೆ ಕಂಡಿತ್ತು. ಇದು 2015 ರಲ್ಲಿ 78% ಗೆ ಕುಸಿತ ಕಂಡಿದೆ. ಈ ಅವಧಿಯಲ್ಲಿ ಮುಸ್ಲಿಂರ ಜನಸಂಖ್ಯೆ 9% ನಿಂದ 14% ಏರಿಕೆ ಕಂಡಿದೆ. ಇನ್ನು ನೇಪಾಳದಲ್ಲಿ ಹಿಂದೂಗಳ ಜನಸಂಖ್ಯೆಯು ದೇಶದ ಒಟ್ಟು ಜನಸಂಖ್ಯೆಯ ಶೇ. 3.6 ರಷ್ಟು ಕುಸಿತ ಕಂಡಿದೆ.