ನವದೆಹಲಿ: ಇಂದು ಕೂಡ ದೆಹಲಿಯ ವಾಯು ಗುಣಮಟ್ಟ ಅತ್ಯಂತ ಕಳಪೆಯಾಗಿದ್ದು, ವಿಷಕಾರಿ ಗಾಳಿಯಿಂದ ಸದ್ಯಕ್ಕೆ ಮುಕ್ತಿಯಿಲ್ಲ ಎಂದು ವರದಿ ಹೇಳಿದೆ.
ದೆಹಲಿಯ ಕನಿಷ್ಠ ತಾಪಮಾನ 11.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಗರಿಷ್ಠ ತಾಪಮಾನ 28.2 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ ಎಂದು ಹೇಳಿದೆ.
ಇದನ್ನು ಓದಿ: ದೆಹಲಿಯಲ್ಲಿ ವಾಯುಮಾಲಿನ್ಯ ತಡೆಯಲು ಸರ್ಕಾರ ಕ್ರಮ
ಭೂಮಿ ವಿಜ್ಞಾನ ಸಚಿವಾಲಯದ ವಾಯು ಗುಣಮಟ್ಟ ಮುನ್ಸೂಚನಾ ವ್ಯವಸ್ಥೆಯ ಪ್ರಕಾರ, ಮುಂದಿನ ಆರು ದಿನಗಳವರೆಗೆ ದೆಹಲಿಯ ವಾಯು ಗುಣಮಟ್ಟವು ಅತ್ಯಂತ ಕಳಪೆಯಿಂದ ಅತ್ಯಂತ ಗಂಭೀರ ವರ್ಗದಲ್ಲಿಯೇ ಮುಂದುವರಿಯುವ ಸಾಧ್ಯತೆಯಿದೆ. ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎಂದು ನಿರೀಕ್ಷಿಸಲಾಗಿದೆ.
ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಅನುಮತಿಸುವುದು ಶಾಲಾ ಮಕ್ಕಳನನು ವಿಷಾನಿಲ ಕೊಠಡಿಯಲ್ಲಿ ಇಟ್ಟಂತೆ ಎಂದು ಅಭಿಪ್ರಾಯಪಟ್ಟಿದೆ.





