Mysore
29
clear sky

Social Media

ಮಂಗಳವಾರ, 20 ಜನವರಿ 2026
Light
Dark

ದಿಲ್ಲಿ ಕಾರು ಸ್ಛೋಟ ಪ್ರಕರಣ : ಉ.ಪ್ರ. ಜಮ್ಮು-ಕಾಶ್ಮೀರ ಸೇರಿ ಹಲವೆಡೆ ಎನ್‌ಐಎ ದಾಳಿ

ಹೊಸದಿಲ್ಲಿ : ದಿಲ್ಲಿ ಕಾರು ಸ್ಛೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸೋಮವಾರ ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರ ಪ್ರದೇಶದ ಹಲವು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿತು . ಈ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಪ್ರಕರಣದಲ್ಲಿ ಭಾಗಿಯಾದವರೊಂದಿಗೆ ಸಂಪರ್ಕ ಹೊಂದಿರುವ ಸ್ಥಳಗಳಲ್ಲಿ ಶಂಕಿತರಿಗಾಗಿ ಶೋಧ ನಡೆಸಲಾಯಿತು.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಬಂಧಿತ ಆರೋಪಿಗಳು ಮತ್ತು ಅವರ ಸಹಚರರ ನಿವಾಸಗಳಲ್ಲಿ ಶೋಧ ಕಾರ್ಯ ನಡೆಯಿತು ಎಂದು ಮೂಲಗಳು ತಿಳಿಸಿವೆ. ನ. ೧೦ರಂದು ನಡೆದ ಭೀಕರ ಕಾರು ಸ್ಛೋಟದಲ್ಲಿ ೧೫ ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳನೇ ಆರೋಪಿ ಫರೀದಾಬಾದ್‌ನ ಧೌಜ್‌ನ ಸೋಯಾಬ್ ಎಂಬಾತನನ್ನು ಬಂಽಸಿದ ಕೆಲವು ದಿನಗಳ ನಂತರ ಎನ್‌ಐಎ ಈ ದಾಳಿ ನಡೆಸುತ್ತಿದೆ. ಭಯೋತ್ಪಾದಕ ಕೃತ್ಯಕ್ಕೆ ಸ್ವಲ್ಪ ಮೊದಲು ಸೋಯಾಬ್ ಎಂಬಾತ ಬಾಂಬರ್ ಉಮರ್ ಉನ್ ನಬಿಗೆ ಆಶ್ರಯ ನೀಡಿದ್ದ ಎನ್ನಲಾಗಿದೆ. ಉಮರ್‌ಗೆ ಆಶ್ರಯ ನೀಡಿದ್ದಲ್ಲದೆ ದಾಳಿಗೂ ಮುನ್ನ ಭಯೋತ್ಪಾದಕರ ಚಲನವಲನಕ್ಕೆ ಲಾಜಿಸ್ಟಿಕಲ್ ಬೆಂಬಲವನ್ನೂ ನೀಡಿದ್ದ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ :-ದಿತ್ವಾ ಚಂಡಮಾರುತ : ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆ ಚಳಿ ಹೆಚ್ಚಳ

ನ.೨೦ರಂದು ತನಿಖಾ ತಂಡವು ಶಾಹೀನ್ ಸಯೀದ್ ಜೊತೆಗೆ ಪುಲ್ವಾಮಾದ ಡಾ.ಮುಜಮ್ಮಿಲ್ ಶಕೀಲ್ ಗನೈ, ಅನಂತನಾಗ್‌ನ ಡಾ.ಅದೀಲ್ ಅಹ್ಮದ್ ರಾಥರ್ ಮತ್ತು ಶೋಪಿಯಾನ್‌ನ ಮುಫ್ತಿ ಇರ್ಫಾನ್ ಅಹ್ಮದ್ ವಾಗೆ ಎಂಬವರನ್ನು ಬಂಽಸಿತ್ತು. ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಽಶರು ನೀಡಿದ ಆದೇಶದ ಮೇರೆಗೆ ಶ್ರೀನಗರದಲ್ಲಿ ಎನ್‌ಐಎ ಈ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದೆ.

ಇದಕ್ಕೂ ಮೊದಲು ಎನ್‌ಐಎ, ಸ್ಛೋಟಕ್ಕೆ ಬಳಸಲಾದ ಕಾರನ್ನು ನೋಂದಾಯಿಸಲಾಗಿದ್ದ ಅಮೀರ್ ರಶೀದ್ ಅಲಿ ಮತ್ತು ಮಾರಕ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನಿಗೆ ತಾಂತ್ರಿಕ ನೆರವು ನೀಡಿದ್ದ ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿತ್ತು.

Tags:
error: Content is protected !!