ಕೊಲಂಬೊ(ಶ್ರೀಲಂಕಾ) : ದಿತ್ವಾ ಚಂಡಮಾರುತದಿಂದ ತೀವ್ರ ಸಂಕಷ್ಟದಲ್ಲಿರುವ ಶ್ರೀಲಂಕಾಕ್ಕೆ ಭಾರತ ಸಹಾಯ ಹಸ್ತ ಚಾಚಿದೆ.
ಭಾರತವು ‘ಆಪರೇಷನ್ ಸಾಗರ್ ಬಂಧು’ ಹೆಸರಿನಲ್ಲಿ ೮೦ ರಾಷ್ಟ್ರೀಯ ವಿಪತ್ತು ಕಾರ್ಯಾಚರಣೆ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿಯನ್ನು ಒಳಗೊಂಡ ಎರಡು ರಕ್ಷಣಾ ತಂಡಗಳನ್ನು ದ್ವೀಪ ರಾಷ್ಟ್ರಕ್ಕೆ ಕಳುಹಿಸಿದೆ. ಭಾರತೀಯರೂ ಸೇರಿದಂತೆ ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣೆಗೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ಹೈಬ್ರಿಡ್ ರಕ್ಷಣಾ ಕಾರ್ಯಾಚರಣೆಗಳನ್ನು ಆರಂಭಿಸಿದೆ.
ಇದನ್ನು ಓದಿ: ಖಾಸಗಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗಿ : ಮಾಧ್ಯಮದವರಿಗೆ ನೋ ಬೈಟ್ ಎಂದ ಸಿಎಂ
ಈ ಕುರಿತು ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಶ್ರೀಲಂಕಾದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಎನ್‌ಡಿಆರ್‌ಎಫ್ ಸಿಬ್ಬಂದಿ ಅಲ್ಲಿಗೆ ಧಾವಿಸಿದ್ದಾರೆ. ಸ್ಥಳೀಯ ಅಽಕಾರಿಗಳೊಂದಿಗೆ ನಿಕಟ ಸಮನ್ವಯ ಸಾಽಸಲಿದ್ದಾರೆ ಎಂದು ತಿಳಿಸಿದ್ದಾರೆ.
ಲಂಕಾದ ಕೋಟ್ಮಲೆಯಲ್ಲಿ ಸಿಲುಕಿದ್ದ ಭಾರತೀಯರು, ವಿದೇಶಿ ಪ್ರಜೆಗಳು ಮತ್ತು ಶ್ರೀಲಂಕಾದವರು ಸೇರಿದಂತೆ ೨೪ ಮಂದಿಯನ್ನು ಗರುಡ ಕಮಾಂಡೋಗಳು ರಕ್ಷಿಸಿ ಕೊಲಂಬೊಗೆ ಸ್ಥಳಾಂತರಿಸಿದ್ದಾರೆ ಎಂದು ಭಾರತೀಯ ವಾಯುಪಡೆ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದೆ.




