ಚೆನ್ನೈ: ದಿತ್ವಾ ಚಂಡಮಾರುತದ ಪರಿಣಾಮ ತಮಿಳುನಾಡಿನ ಕರಾವಳಿ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ.
ಚಂಡಮಾರುತದ ಪರಿಣಾಮ ಬಲವಾದ ಗಾಳಿ ಬೀಸುತ್ತಿದ್ದು ಹಾಗೂ ಭಾರೀ ಮಳೆಯ ಹವಾಮಾನ ಪರಿಸ್ಥಿತಿಯಿಂದಾಗಿ ಜನರು ಅನಗತ್ಯವಾಗಿ ಹೊರಗೆ ಹೋಗದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ತಂಜಾವೂರು, ನಾಗಪಟ್ಟಣಂ, ಮೈಲಾಡುತುರೈ, ತಿರುವಡೈಮರುದೂರ್, ಕುಂಭಕೋಣಂ, ಪಾಪನಾಸಂ, ತಿರುವಯ್ಯರು, ಪಟ್ಟುಕೊಟ್ಟೈ, ಕಡಲೂರು ಹಾಗೂ ಚೆನ್ನೈನ ಕೆಲವು ಭಾಗಗಳು ಸೇರಿದಂತೆ ಭಾರೀ ಮಳೆಯಾಗುತ್ತಿದೆ.
ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರ ಸನ್ನದ್ಧವಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ. ಜೊತೆಗೆ ಐದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಗಳು ಕೂಡ ಸಿದ್ಧರಾಗಿದ್ದಾರೆ.





