Mysore
34
scattered clouds

Social Media

ಶುಕ್ರವಾರ, 01 ಮೇ 2026
Light
Dark

ಟ್ರಂಪ್‌ ಭಾಷಣದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಭಾರೀ ಏರಿಕೆ

ವಾಷಿಂಗ್ಟನ್:‌ ಯುದ್ಧಕ್ಕೆ ಸಂಬಂಧಿಸಿದಂತೆ ಅಮೇರಿಕಾ ಪ್ರಜೆಗಳನ್ನು ಉದ್ದೇಶಿಸಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾಷಣ ಮಾಡಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ದಿಢೀರ್‌ ಏರಿಕೆಯಾಗಿದೆ.

ಇನ್ನೂ ಎರಡು ಮೂರು ವಾರಗಳ ಕಾಲ ಯುದ್ಧ ಮುಂದುವರಿಯಲಿದೆ ಎಂದು ಟ್ರಂಪ್‌ ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಕಚ್ಚಾತೈಲದ ಬೆಲೆ 4.5% ಏರಿಕೆಯಾಗಿದೆ. ಒಂದು ಬ್ಯಾರೆಲ್‌ ಕಚ್ಚಾ ತೈಲದ ದರ 106.42 ಡಾಲರ್‌ಗೆ ತಲುಪಿದೆ. ಅಮೇರಿಕಾದ ವೆಸ್ಟ್‌ ಟೆಕ್ಸಾಸ್‌ ಇಂಟರ್ಮಿಡಿಯೇಟ್‌ ದರ 4% ಏರಿಕೆಯಾಗಿ 104.24 ಡಾಲರ್‌ನಲ್ಲಿ ವ್ಯವಹಾರ ನಡೆಸುತ್ತಿದೆ.

ದೇಶವನ್ನು ಉದ್ದೇಶಿಸಿ ಸುಮಾರು 18 ನಿಮಿಷಗಳ ಕಾಲ ಮಾತನಾಡಿದ್ದ ಡೊನಾಲ್ಡ್‌ ಟ್ರಂಪ್‌ ಅವರು, ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ವಿರುದ್ಧ ವಾಗ್ದಾಳಿ ನಡೆಸಿ, ತಮ್ಮನ್ನು ತಾವೇ ಹೊಗಳಿಕೊಂಡಿದ್ದರು.

ಈ ಹೋರಾಟದಲ್ಲಿ ಅಮೇರಿಕಾಕ್ಕೆ ಸಾಥ್‌ ನೀಡುತ್ತಿರುವ ಇಸ್ರೇಲ್‌ ಅನ್ನು ಟ್ರಂಪ್‌ ವಿಶೇಷವಾಗಿ ಶ್ಲಾಘಿಸಿದ್ದರು. ಇಸ್ರೇಲ್‌ನ ಸೈನಿಕರು ಹಾಗೂ ನಾಯಕತ್ವದ ಧೈರ್ಯವನ್ನು ಅವರು ಕೊಂಡಾಡಿದ್ದರು.

Tags:
error: Content is protected !!