Mysore
29
clear sky

Social Media

ಮಂಗಳವಾರ, 20 ಜನವರಿ 2026
Light
Dark

ಕೋವಿಡ್‌-19 ಸೋಂಕಿನಿಂದ ಮನುಷ್ಯನ ರಕ್ತನಾಳಗಳು ಮುಪ್ಪಾಗುವ ಸಾಧ್ಯತೆ: ಸಂಶೋಧನೆಯಿಂದ ಬಹಿರಂಗ

ನವದೆಹಲಿ: ಕೋವಿಡ್-19 ಸೋಂಕಿನಿಂದ ಮನುಷ್ಯನ ರಕ್ತನಾಳಗಳು ಮುಪ್ಪಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಯೊಂದು ತಿಳಿಸಿದೆ.

ಕೊರೊನಾ ಸೋಂಕಿನಿಂದ ಮನುಷ್ಯನ ರಕ್ತನಾಳಗಳು 5 ವರ್ಷ ವಯಸ್ಸಾದಂತೆ ಪರಿವರ್ತನೆಯಾಗುತ್ತದೆ ಎಂದು ಹೇಳಿದೆ. ರಕ್ತನಾಳ ಮುಪ್ಪಾಗುವಿಕೆ ಸಾಧ್ಯತೆಯ ತೀವ್ರತೆ ಮಹಿಳೆಯರಲ್ಲಿ ಹೆಚ್ಚು ಎಂದು ಅದು ಎಚ್ಚರಿಸಿದೆ.

2020ರಿಂದ 22ರಲ್ಲಿ 16 ದೇಶಗಳ 2390 ಜನರನ್ನು ಅಧ್ಯಯನಕ್ಕೊಳಪಡಿಸಿರುವ ಪ್ಯಾರಿಸ್‌ ದೇಶದ ತಜ್ಞರು ಇದನ್ನು ತಿಳಿಸಿದ್ದಾರೆ. ತನ್ನ ಸಹಜ ವಯಸ್ಸಿಗಿಂತ ರಕ್ತನಾಳಗಳ ವಯಸ್ಸು ಹೆಚ್ಚಳವಾಗಿ ರಕ್ತನಾಳಗಳು ಗಟ್ಟಿಯಾಗುತ್ತಿವೆ. ಇದರಿಂದ ಉಸಿರಾಟದ ಸಮಸ್ಯೆ, ಆಯಾಸ, ಪಾಶ್ರ್ವವಾಯು, ಹೃದಯಾಘಾತದಂತಹ, ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಪಟ್ಟ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಹೆಚ್ಚಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

Tags:
error: Content is protected !!