Mysore
32
scattered clouds

Social Media

ಭಾನುವಾರ, 27 ಏಪ್ರಿಲ 2025
Light
Dark

ಕಾಮನ್‌ವೆಲ್ತ್‌ ಗೇಮ್ಸ್‌: ದೆಹಲಿ ಪರವಾಗಿ ಆಡಿಲ್ಲ ಎಂದ ಆಪ್‌ ಸರ್ಕಾರಕ್ಕೆ ಮುಖಭಂಗ ಆಗುವ ರೀತಿ ಸತ್ಯಬಿಚ್ಚಿಟ್ಟ ದಿವ್ಯ ಕಾಕ್ರನ್

ನವದೆಹಲಿ :  ಕಾಮನ್‌ವೆಲ್ತ್ ಗೇಮ್ಸ್‌ನನಲ್ಲಿ ಭಾರತ ಅದ್ವಿತೀಯ ಸಾಧನೆ ಮಾಡಿದೆ. ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ದೆಹಲಿ ಮಹಿಳಾ ರಸ್ಲರ್ ದಿವ್ಯ ಕಾಕ್ರನ್ ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಆದರೆ ಪದಕ ಸಂಭ್ರಮದಲ್ಲಿ ದಿವ್ಯ, ತನಗೆ ದೆಹಲಿ ಆಪ್ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಬಹಿರಂಗಪಡಿಸಿದ್ದರು. ಇದರಿಂದ ರೊಚ್ಚಿಗೆದ್ದ ಆಪ್ ಶಾಸಕ, ದಿವ್ಯ ಕಾಕ್ರನ್ ದೆಹಲಿ ಪರ ಇದುವರೆಗೂ ಆಡಿಲ್ಲ ಎಂದು ರಾಜಕೀಯ ಹೇಳಿಕೆ ನೀಡಿದ್ದರು. ಆದರೆ ಈ ಆರೋಪಕ್ಕೆ ಸ್ವತಃ ದಿವ್ಯ ಕಾಕ್ರನ್ ಉತ್ತರ ನೀಡಿದ್ದಾರೆ. ದೆಹಲಿ ಸರ್ಕಾರ ನೀಡಿರುವ ಪ್ರಮಾಣ ಪತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದ ಆಪ್ ಸರ್ಕಾರದ ಅಸಲಿಯತ್ತು ಬಹಿರಂಗಗೊಂಡಿದೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದಿವ್ಯ ಪಡೆದ ಎರಡನೇ ಪದಕವಾಗಿದೆ. 2018ರ ಕ್ರೀಡಾಕೂಟದಲ್ಲೂ ದಿವ್ಯ ಪದಕ ಸಾಧನೆ ಮಾಡಿದ್ದರು. ಈ ಬಾರಿ ಪದಕ ಗೆದ್ದ ಬೆನ್ನಲ್ಲೇ ಸಿಎಂ ಅರವಿಂದ್ ಕೇಜ್ರಿವಾಲ್ ಅಭಿನಂದನೆ ಸಲ್ಲಿಸಿದ್ದರು. ಇದುವರೆಗೂ ಯಾವ ರೀತಿಯ ನೆರವು ನೀಡಿದ ಆಮ್ ಆದ್ಮಿ ಸರ್ಕಾರ ಇದೀಗ ಪದಕ ಗೆದ್ದಾಗ ಕ್ರೆಡಿಟ್ ಪಡೆಯುವ ಲೆಕ್ಕಾಚಾರದಲ್ಲಿತ್ತು. ಈ ಅಭಿನಂದನೆಗೆ ಪ್ರತಿಕ್ರಿಯೆ ನೀಡಿದ ದಿವ್ಯ ಕಾಕ್ರನ್, ತಾನು 20 ವರ್ಷಗಳಿಂದ ದೆಹಲಿಯಲ್ಲಿದ್ದೇನೆ. ಅಭ್ಯಾಸ, ತರಬೇತಿ ಎಲ್ಲವೂ ದೆಹಲಿಯಲ್ಲೇ ಪಡೆದಿದ್ದೇನೆ. ಆದರೆ ಇದುವರೆಗೂ ಯಾವುದೇ ನೆರವು ಸಿಕ್ಕಿಲ್ಲ. ನಗದು ಬಹುಮಾನ ಸೇರಿದಂತೆ ಯಾವ ನೆರವೂ ಆಪ್ ಸರ್ಕಾರ ನೀಡಿಲ್ಲ ಎಂದು ದಿವ್ಯ ಕಾಕ್ರನ್ ಬೇಸರ ವ್ಯಕ್ತಪಡಿಸಿದ್ದರು.

2018ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ದಿವ್ಯ ಕಾಕ್ರನ್‌ಗೆ ಆಪ್ ಸರ್ಕಾರ ಯಾವುದೇ ಬಹಮಾನ, ನಗದು, ಆರ್ಥಿಕ ನೆರವು ನೀಡಿಲ್ಲ. ಇಷ್ಟೇ ಅಲ್ಲ ಇದುವರೆಗೂ ಯಾವ ನೆರವನ್ನೂ ನೀಡಿಲ್ಲ. ಇದೀಗ ಪದಕ ಗೆದ್ದಾಗ ಅದರ ಶ್ರೇಯಸ್ಸು ಪಡೆಯಲು ಬಂದ ಆಪ್ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸರಿಯಾಗಿ ತಿರುಗೇಟು ನೀಡಿದ್ದರು. ದಿವ್ಯ ಕಾಕ್ರನ್ ಟ್ವೀಟ್, ಆಪ್ ಶಾಸಕ ಸೌರಬ್ ಭಾರದ್ವಾಜ್ ಕೆರಳಿಸಿತ್ತು. ದಿವ್ಯ ಕಾಕ್ರನ್ ದೆಹಲಿ ಪರ ಆಡಿಲ್ಲ. ಹೀಗಾಗಿ ದೆಹಲಿ ಸರ್ಕಾರ ನೆರವು ನೀಡುವ ಅಗತ್ಯವೆಲ್ಲಿದೆ. ಯೋಗಿ ಆದಿತ್ಯನಾಥ್ ನಿಮಗೆ ಯಾವುದೇ ನೆರವು ನೀಡಿಲ್ಲವೇ  ಎಂದು ಅರವಿಂದ್ ಕೇಜ್ರಿವಾಲ್ ಪರ ಬ್ಯಾಟ್ ಬೀಸಿದ್ದರು. ಆದರೆ ಈ ನಿಲುವು ಹಾಗೂ ಪ್ರಶ್ನೆ ಆಪ್‌ಗೆ ತಿರುಗುಬಾಣವಾಗಿದೆ.

2011 ರಿಂದ 2017ರ ವರೆಗೆ ದೆಹಲಿ ಪರ ಆಡಿದ ಪ್ರಮಾಣ ಪತ್ರ ಇಲ್ಲಿದೆ. ಇನ್ನೂ ನಿಮಗೆ ನಂಬಲು ಸಾಧ್ಯವಾಗುತ್ತಿಲ್ಲ ಅಂದರೆ ದೆಹಲಿ ಪ್ರತಿನಿದಿಸಿ17 ಚಿನ್ನದ ಪದಕ  ಗೆದ್ದಿದ್ದೇನೆ. ಅದರ ಪ್ರಮಾಣ ಪತ್ರಗಳನ್ನು ಪೋಸ್ಟ್ ಮಾಡಬೇಕಾ ಎಂದು ದಿವ್ಯ ಖಾರವಾಗಿ ಪ್ರಶ್ನಿಸಿದ್ದಾರೆ. ಅಷ್ಟರಲ್ಲೇ ಆಪ್ ಮಾನ ಬೀದಿಗೆ ಬಂದಿದೆ. ದೇಶಕ್ಕೆ ಕಂಚಿನ ಪದಕ ತಂದುಕೊಟ್ಟ ಪ್ರತಿಭೆಗೆ ಯಾವುದೇ ನೆರವು ನೀಡದೆ ಇದೀಗ ಅದರ ಮೇಲೆ ರಾಜಕೀಯ ಮಾಡುತ್ತಿರುವ ಆಮ್ ಆದ್ಮಿ ಹಾಗೂ ಆಪ್ ನಾಯಕರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಆಪ್ ಶಾಸಕ ತಪ್ಪನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ