Mysore
20
mist

Social Media

ಶನಿವಾರ, 24 ಜನವರಿ 2026
Light
Dark

ಉತ್ತರಾಖಂಡದಲ್ಲಿ ಮೇಘಸ್ಫೋಟ: ಪ್ರವಾಹದಲ್ಲಿ 9 ಕಾರ್ಮಿಕರು ನಾಪತ್ತೆ

Cloudburst in Uttarakhand 9 workers missing in floods

ಡೆಹ್ರಾಡೂನ್:‌ ಉತ್ತರಾಖಂಡದಲ್ಲಿ ಮೇಘಸ್ಪೋಟಗೊಂಡು ಪ್ರವಾಹ ಉಂಟಾದ ಪರಿಣಾಮ ನಿರ್ಮಾಣ ಹಂತದ ಹೋಟೆಲ್‌ನಲ್ಲಿದ್ದ 9 ಕಾರ್ಮಿಕರು ನಾಪತ್ತೆಯಾಗಿದ್ದಾರೆ.

ಬಾರ್ಕೋಟ್-ಯಮುನೋತ್ರಿ ರಸ್ತೆಯಲ್ಲಿ ಮೇಘಸ್ಫೋಟಗೊಂಡಿದ್ದು, ಕಾರ್ಮಿಕರು ಪ್ರವಾಹದಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಮೇಘಸ್ಫೋಟದ ಪರಿಣಾಮ ಚಾರ್‌ಧಾಮ್‌ ಯಾತ್ರೆ ಸ್ಥಗಿತಗೊಳಿಸಲಾಗಿದ್ದು, ಗಂಗೋತ್ರಿ, ಯಮುನೋತ್ರಿ, ಕೇದಾರನಾಥ, ಭದ್ರಿನಾಥ ಯಾತ್ರೆ ಕೂಡ ಸ್ಥಗಿತಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಯಮುನಾ ನದಿಯಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದ್ದು, ಹಲವು ರಸ್ತೆಗಳು ಬಂದ್‌ ಆಗಿವೆ.

ರುದ್ರಪ್ರಯಾಗ್ ಜಿಲ್ಲೆಯ ಸೋನ್‌ ಪ್ರಯಾಗ್-ಮುಂಕಟಿಯಾ ರಸ್ತೆ ಬಂದ್‌ ಆಗಿದ್ದು, ಕೇದಾರನಾಥಕ್ಕೆ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ಮಾರ್ಗ ಬಂದ್‌ ಮಾಡಲಾಗಿದೆ.

Tags:
error: Content is protected !!