ಕೊಲ್ಕತ್ತಾ(ಪಶ್ಚಿಮ ಬಂಗಾಳ) : ನಾವು 2028ಕ್ಕೆ ಚಂದ್ರಯಾನ 4 ಉಡಾವಣೆ ಮಾಡುವ ಗುರಿ ಹೊಂದಿದ್ದೇವೆ ಎಂದು ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಹೇಳಿದರು.
ಇಸ್ರೋ ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೂ ಮೊದಲು ವಾಣಿಜ್ಯ ಸಂವಹನ ಉಪಗ್ರಹ ಮತ್ತು ಬಹು ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ರಾಕೆಟ್‌ಗಳ ಮೂಲಕ ಏಳು ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿ ಹೊಂದಿದೆ. ಚಂದ್ರನ ಮಾದರಿ ಸಂಗ್ರಹಿಸಿ ತರುವ ಮಿಷನ್ ಆಗಿರುವ ಚಂದ್ರಯಾನ ಅನ್ನು ಸರ್ಕಾರ ಅನುಮೋದಿಸಿದೆ ಮತ್ತು ಇದು ಭಾರತದ ಅತ್ಯಂತ ಸಂಕೀರ್ಣವಾದ ಪ್ರಯತ್ನವಾಗಿದೆ ಎಂದರು.
ಇದನ್ನು ಓದಿ: ಬೆಳ್ಳಂಬೆಳಗ್ಗೆ ನಭಕ್ಕೆ ಜಿಗಿಯಲಿದೆ ಇಸ್ರೋದ 101ನೇ ರಾಕೆಟ್
2035ರ ವೇಳೆಗೆ ಪೂರ್ಣಗೊಳಿಸಬೇಕೆಂದುಕೊಂಡಿರುವ ಭಾರತೀಯಬಾಹ್ಯಾಕಾಶ ನಿಲ್ದಾಣದ ಕೆಲಸವನ್ನು ಇಸ್ರೋ ಈಗಾಗಲೇ ಪ್ರಾರಂಭಿಸಿದೆ. ಐದು ವಾಡ್ಯೂಲ್‌ಗಳಲ್ಲಿ ಮೊದಲನೆಯದನ್ನು ೨೦೨೮ರ ವೇಳೆಗೆ ಕಕ್ಷೆಗೆ ಸೇರಿಸಲಾಗುವುದು. ಭಾರತದ ಮೊದಲ ವಾನವ-ಬಾಹ್ಯಾಕಾಶ ಹಾರಾಟದ ಮಿಷನ್ ಗಗನಯಾನಕುರಿತು ಪ್ರತಿಕ್ರಿಯಿಸಿ,
ಮಾನವರಹಿತ ಮಿಷನ್ ಉಡಾವಣೆಯನ್ನು 2027ಕ್ಕೆ ನಡೆಸಲು ನಿರ್ಧರಿಸಲಾಗಿತ್ತು ಮತ್ತು ನಿಗದಿುಂಂತೆ ಅದನ್ನು ನಡೆಸುತ್ತೇವೆ ಎಂದು ನಾರಾಯಣನ್ ಹೇಳಿದರು.





