Mysore
21
overcast clouds

Social Media

ಗುರುವಾರ, 17 ಜುಲೈ 2025
Light
Dark

ಆಂಧ್ರಪ್ರದೇಶ: ಭರ್ಜರಿ ಬಹುಮತ ಪಡೆದ ಟಿಡಿಪಿ ನೇತೃತ್ವದ ಮೈತ್ರಿಗೆ ಜಯ

ನವದೆಹಲಿ: ಲೋಕಸಭಾ ಚುನಾವಣೆಯ ಜೊತೆ ಜೊತೆಗೆ ನಡೆದ ಅಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯಗಳಿಸಿದೆ. ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್‌ ರೆಡ್ಡಿ ಅವರಿಗೆ ತೀವ್ರ ಹಿನ್ನಡೆ ಆಗಿದೆ.

ಆಂಧ್ರಪ್ರದೇಶದಲ್ಲಿ ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಮೈತ್ರಿಕೂಟವು ಆಡಳಿತಾರೂಢ ವೈಎಸ್ಆ‌ರ್‌ಪಿಯನ್ನು ಹೀನಾಯವಾಗಿ ಸೋಲಿಸಿದೆ. ಆ ಮೂಲಕ 5 ವರ್ಷಗಳ ನಂತರ ಮತ್ತೆ ಟಿಡಿಪಿ ನೆಲೆ ಕಂಡುಕೊಂಡಿದೆ. ಆದರೆ, ಕಾಂಗ್ರೆಸ್ ಇಲ್ಲಿ ಶೂನ್ಯವಾಗಿದ್ದು, ಇಂಡಿಯಾ ಕೂಟವು ಖಾತೆ ತೆರೆಯದೇ ಇರುವುದು ಆಶ್ಚರ್ಯವಾಗಿದೆ.

175 ಸದಸ್ಯ ಬಲದ ವಿಧಾನಸಭೆಯಲ್ಲಿ 126 ವಿಧಾನಸಭೆಯ ಕ್ಷೇತ್ರಗಳಲ್ಲಿ ಜಯಗಳಿಸಿರುವ ಎನ್‌ಡಿಎ 126 ಕ್ಷೇತ್ರಗಳು, ವೈಎಸ್‌ಆ‌ಪಿ 26, ಇಂಡಿಯಾ 00. ಇತರರು 15 ಕ್ಷೇತ್ರಗಳನ್ನು ಗೆದ್ದಿದ್ದಾರೆ. ಈ ಪೈಕಿ ಎನ್‌ಡಿಎ ಮೈತ್ರಿಯ ಪವನ್‌ ಕಲ್ಯಾಣ್‌ ಪಕ್ಷ 21 ಸೀಟ್‌ಗಳನ್ನು ಗೆದ್ದು ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗಿದೆ.

ಪ್ರಚಂಡ ಬಹುಮತದೊಂದಿಗೆ ಅಧಿಕಾರದ ಗದ್ದಿಗೆ ಏರಿದೆ. ವೈಎಸ್ ಆರ್ ಸಿಪಿ ಕೇವಲ 22 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಪುಲಿವೆಂದುಲು ಕ್ಷೇತ್ರದಲ್ಲಿ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಗೆಲುವು ಸಾಧಿಸಿದ್ದಾರೆ.

ಮತಗಟ್ಟೆ ಸಮೀಕ್ಷೆಗಳ ಪೈಕಿ ಕೆಲವು ಅತಂತ್ರ ಕೊಟ್ಟಿದ್ದವು. ಚಂದ್ರಬಾಬು ನಾಯ್ಡು ಮತ್ತೊಮ್ಮೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.

Tags:
error: Content is protected !!