ಶ್ರೀನಗರ: ಮೇ.12ರ ಸಭೆಯಲ್ಲಿ ತೆಗೆದುಕೊಡ ನಿರ್ಧಾರದಂತೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಮುಂದುವರಿಯಲಿದೆ ಎಂದು ಸೇನಾ ಅಧಿಕಾರಿಯೊಬ್ಬರು ಇಂದು ಮಾಹಿತಿ ನೀಡಿದ್ದಾರೆ.
ಕದನ ವಿರಾಮ ಒಪ್ಪಂದ ಇಂದಿಗೆ ಕೊನೆಗೊಳ್ಳಲಿದೆ ಎಂಬ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಮಾಹಿತಿ ನೀಡಿರುವ ಸೇನಾ ಅಧಿಕಾರಿಯೊಬ್ಬರು, ಡಿಜಿಎಂಒಗಳ ಸಭೆಯಲ್ಲಿ ನಿರ್ಧಾರ ಮಾಡಿರುವಂತೆ ಕದನ ವಿರಾಮ ಮುಂದುವರಿಯುತ್ತದೆ. ಕದನ ವಿರಾಮ್ಕೆ ಇಂತದ್ದೆ ಮುಕ್ತಾಯದ ದಿನ ಎಂಬುವುದು ಇಲ್ಲ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಕೊನೆಗೊಳ್ಳಿದೆ ಎಂಬ ವದಂತಿಗೆ ಇಂದು ಸೇನಾ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.





