Mysore
27
broken clouds
Light
Dark

ಸೇತುವೆಯಿಂದ ಉರುಳಿದ ಬಸ್ ಬೆಂಕಿಗೆ ಆಹುತಿ: 40 ಮಂದಿ ಸಾವು

ಕ್ವೆಟ್ಟಾ (ಪಾಕಿಸ್ತಾನ): ಸೇತುವೆಯಿಂದ ಕೆಳಗೆ ಉರುಳಿ ಬಿದ್ದ ಬಸ್‌ವೊಂದು ಬೆಂಕಿಗೆ ಆಹುತಿಯಾಗಿದ್ದು, ಅದರಲ್ಲಿದ್ದ ಕನಿಷ್ಠ ೪೦ ಮಂದಿ ಮೃತಪಟ್ಟಿರುವ ದುರಂತ ನೈರುತ್ಯ ಪಾಕಿಸ್ತಾನದಲ್ಲಿ ವರದಿಯಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬಲೂಚಿಸ್ತಾನ ಪ್ರಾಂತ್ಯದ ಲಾಸ್‌ಬೆಲಾ ಜಿಲ್ಲೆಯ ಹಿರಿಯ ಅಧಿಕಾರಿ ಹಮ್ಜಾ ಅಂಜುಮ್ ಅವರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಶವಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಕ್ವೆಟ್ಟಾ ಹಾಗೂ ದಕ್ಷಿಣದ ಬಂದರು ನಗರ ಕರಾಚಿ ನಡುವೆ ಶನಿವಾರ ರಾತ್ರಿ ಸಂಚರಿಸುತ್ತಿದ್ದ ಬಸ್‌ನಲ್ಲಿ ೪೮ ಮಂದಿ ಪ್ರಯಾಣಿಕರಿದ್ದರು. ಬಸ್‌ನಲ್ಲಿದ್ದವರ ಪೈಕಿ ಮೂವರನ್ನು ರಕ್ಷಿಸಲಾಗಿದೆ ಎಂದು ಅಂಜುಮ್ ತಿಳಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ