ಶ್ರೀನಗರ: ಜಮ್ಮು-ಕಾಶ್ಮೀರದ ರಾಂಬನ್ ಜಿಲ್ಲೆಯ ಚಂದರ್ಕೋಟ್ ಲ್ಯಾಂಗರ್ ಸ್ಥಳದಲ್ಲಿ ಅಮರನಾಥ ಯಾತ್ರೆಯ ಪಹಲ್ಗಾಮ್ ಬೆಂಗಾವಲಿನ ಕೊನೆಯ ವಾಹನವು ನಿಯಂತ್ರಣ ತಪ್ಪಿ ಸಿಲುಕಿಕೊಂಡಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 36 ಯಾತ್ರಿಕರು ಗಾಯಗೊಂಡಿದ್ದಾರೆ.
ಅಪಘಾತದಲಲಿ ಯಾತ್ರಾ ಬೆಂಗಾವಲಿನ ಭಾಗವಾಗಿರುವ ನಾಲ್ಕು ಬಸ್‌ಗಳು ಹಾನಿಗೊಳಗಾಗಿವೆ. ಪಹಲ್ಗಾಮ್ ಬೆಂಗಾವಲಿನ ಕೊನೆಯ ವಾಹನವು ನಿಯಂತ್ರಣ ತಪ್ಪಿ ಚಂದರ್ಕೋಟ್ ಲ್ಯಾಂಗರ್ ಸ್ಥಳದಲ್ಲಿ ಸಿಕ್ಕಿಬಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು 4 ವಾಹನಗಳಿಗೆ ಹಾನಿಯಾಗಿದ್ದು, 36 ಯಾತ್ರಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಗಾಯಾಳುಗಳನ್ನು ಶ್ರೀನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.



