Mysore
36
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಸೂರತ್‌ನಲ್ಲಿ ಕಟ್ಟಡ ಕುಸಿತ: 7 ಸಾವು, ಮಾಲೀಕನ ವಿರುದ್ಧ ಎಫ್‌ಐಆರ್

ಸೂರತ್: ಗುಜರಾತ್‌ನ ಸೂರತ್‌ನಲ್ಲಿ ಶನಿವಾರ(ಜು.6) ಆರು ಅಂತಸ್ತಿನ ಕಟ್ಟಡ ಕುಸಿತ ಉಂಟಾಗಿದ್ದು, ರಾತ್ರಿಯಿಡಿ ಹಾಗೂ ಭಾನುವಾರ ಕಾರ್ಯಚರಣೆ ನಡೆಸಿ ಆರು ಮೃತದೇಹಗಳನ್ನು ಹೊರತೆಗಿದ್ದು, ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಟ್ಟಡದ ಬಾಡಿಗೆ ಸಂಗ್ರಹಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಮಾಲೀಕರ ವಿರುದ್ಧವು ಎಫ್‌ಐಆರ್‌ ದಾಖಲಾಗಿದೆ ಎಂದರು.

ಸೂರತ್ ಸಚಿನ್ ಪಾಲಿ ಗ್ರಾಮದಲ್ಲಿ ಶನಿವಾರ ಸುಮಾರು ೬ ಅಂತಸ್ತಿನ ಅಪಾರ್ಟ್ ಮೆಂಟ್ ಕುಸಿದಿದೆ. ತಡರಾತ್ರಿ ಈ ದುರಂತ ಸಂಭವಿಸಿದ್ದು ರಾತ್ರಿ ಕಟ್ಟಡದಲ್ಲಿ ಮಲಗಿದ್ದ ಹಲವರು ಅವಶೇಷಗಳಡಿಯಲ್ಲಿ ಸಿಲುಕಿದ್ದರು. ತಕ್ಷಣವೇ ಎನ್‌ಡಿಆರ್‌ಎಫ್‌, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಚರಣೆ ಆರಂಭಿಸಿದ್ದರು.

ಕಾರ್ಯಾಚರಣೆ ನಡೆಸಿ ಈವರೆಗೂ 7 ಮೃತ ದೇಹಗಳನ್ನು ಹೊರ ತಂದಿದ್ದಾರೆ. ಅವಶೇಷಗಳಡಿಯಲ್ಲಿ ಇನ್ನೂ 6 ರಿಂದ 7 ಮಂದಿ ಸಿಲುಕಿರುವ ಸಾಧ್ಯತೆ ಇದೆ. ಅಂತೆಯೇ 15 ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ.

2017 ರಲ್ಲಿ ನಿರ್ಮಿಸಲಾಗಿದ್ದ ಈ ಅಪಾರ್ಟ್ ಮೆಂಟ್ ನಲ್ಲಿ ಐದು ಕುಟುಂಬಗಳು ವಾಸಿಸುತ್ತಿದ್ದವು. ಕುಸಿತ ಸಂಭವಿಸಿದಾಗ ಹಲವಾರು ನಿವಾಸಿಗಳು ಕೆಲಸದಲ್ಲಿದ್ದರು. ಆದರೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ಹೊರಗೆ ಹೋಗಿದ್ದರು. ಕಟ್ಟಡವು ಕೇವಲ ಎಂಟು ವರ್ಷಗಳಷ್ಟು ಹಳೆಯದಾಗಿದ್ದರೂ, ಹೆಚ್ಚಿನ ಫ್ಲ್ಯಾಟ್‌ಗಳು ಖಾಲಿ ಮತ್ತು ಶಿಥಿಲಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags: