ಕಾಂಗೋ: ಇಲ್ಲಿನ ವಾಯುವ್ಯ ಈಕ್ವೇಟರ್ ಪ್ರಾಂತ್ಯದಲ್ಲಿ ಹವಾಮಾನ ವೈಪರೀತ್ಯದ ನಡುವೆ ದೋಣಿ ಮುಳುಗಿ ಕನಿಷ್ಠ 30 ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ.
ಕಾಣೆಯಾದವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಯುತ್ತಿದ್ದು, ಕಾಂಗೋದ ನದಿಗಳು ಅದರ 100 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ವಿಶೇಷವಾಗಿ ಮೂಲಸೌಕರ್ಯಗಳು ಕಳಪೆಯಾಗಿರುವ ಅಥವಾ ಅಸ್ತಿತ್ವದಲ್ಲಿಲ್ಲದ ದೂರದ ಪ್ರದೇಶಗಳಲ್ಲಿ ಪ್ರಮುಖ ಸಾರಿಗೆ ಸಾಧನವಾಗಿದೆ.
ಕಳಪೆ ನಿರ್ವಹಣೆ, ಓವರ್‌ಲೋಡ್‌ನಿಂದ ದೋಣಿ ಮಗುಚಿರಬಹುದು ಎಂದು ಶಂಕಿಸಲಾಗಿದೆ. ಭಾರೀ ಮಳೆಯಿಂದಾಗಿ ಉಂಟಾದ ಪ್ರಕ್ಷುಬ್ಧ ನೀರಿನಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.